×
Ad

ಅಲ್ಪಸಂಖ್ಯಾತ ಸಮುದಾಯಕ್ಕೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಸೂಚನೆ

Update: 2021-05-11 22:04 IST

ಉಡುಪಿ, ಮೇ 11: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ವಾಸಿಸು ತ್ತಿರುವ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಜನಾಂಗದವರು ತಮ್ಮ ಪ್ರದೇಶಗಳ ಹತ್ತಿರದ ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.

ಜಿಲ್ಲೆಯ ಆರೋಗ್ಯ ಕೇಂದ್ರಗಳ ವಿವರ ಹಾಗೂ ಕೋವಿಡ್-19 ಪರೀಕ್ಷೆಯ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನ ಆಝಾದ್ ಭವನ, ಪಶು ಚಿಕಿತ್ಸಾಲಯದ ಹತ್ತಿರ, ಅಲೆವೂರು ರಸ್ತೆ, ಮಣಿಪಾಲ, ಉಡುಪಿ, ದೂರವಾಣಿ: 0820-2574596 ಅಥವಾಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ತಾಲೂಕು ಕಂದಾಯ ನೌಕರರ ಕಟ್ಟಡ, ಹಳೆ ತಹಶೀಲ್ದಾರರ ಕಚೇರಿ ಹಿಂಭಾಗ, ಹೊಸ ಬಸ್‌ನಿಲ್ದಾಣ, ಕುಂದಾಪುರ, ದೂರವಾಣಿ: 08254- 230370, ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ನೆಲ ಮಹಡಿ, ಮಿನಿ ವಿಧಾನ ಸೌಧ, ತಾಲೂಕು ಕಚೇರಿ ಕಂಪೌಂಡ್, ಕಾರ್ಕಳ ದೂರವಾಣಿ: 08258- 231101 ಇಲ್ಲಿ ಸಂಪರ್ಕಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯ ಜಿಲ್ಲಾ ಅಧಿಕಾರಿ ಅವರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News