ಉಡುಪಿ ನಗರಸಭೆ: ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಗೆ ಅವಕಾಶ

Update: 2021-05-11 16:37 GMT

ಉಡುಪಿ, ಮೇ 11:ನಗರ ಸ್ಥಳೀಯ ಸಂಸ್ಥೆಗಳು ನೀಡುವ ವಿವಿಧ ಸೇವೆಗಳ ಶುಲ್ಕಗಳನ್ನು ಪಾವತಿಸಲು ಇ-ಸ್ವೀಕೃತಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ, ಖಜಾನೆ-2 ತಂತ್ರಾಂಶದೊಂದಿಗೆ ಜೋಡಣೆ ಮಾಡಿ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ವಿವಿಧ ಸೇವೆಗಳ ಶುಲ್ಕಗಳನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಹಾಗೂ ಈ ಬಗ್ಗೆ ನಿಷೇದಾಜ್ಞೆ ಜ್ಯಾರಿಯಲ್ಲಿರುವುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಈ ಕೆಳಕಂಡ 2 ಸೇವೆಗಳ ಶುಲ್ಕಗಳನ್ನು                http://www.mrc.gov.in/epay/otherMultiServices.htm - ಲಿಂಕನ್ನು ಬಳಸಿ ಆನ್‌ಲೈನ್ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಕುಡಿಯುವ ನೀರಿನ ಶುಲ್ಕ (ನೀರಿನ ಬಳಕೆದಾರರ ಬಿಲ್)ನ್ನು ಪಾವತಿಸಲು: ಜಿಲ್ಲೆ ಮತ್ತು ನಗರ ಸ್ಥಳೀಯ ಸಂಸ್ಥೆಯ ಹೆಸರನ್ನು ಉಡುಪಿ ಎಂದು ಆಯ್ಕೆ ಮಾಡಿಕೊಂಡು ಸೇವೆಯ (ಹೆಡ್ ಆಫ್ ಅಕೌಂಟ್)ನೀರು ಸರಬರಾಜು ಮತ್ತು ಒಳಚರಂಡಿ ಬಳಕೆ ಶುಲ್ಕ ಆಯ್ಕೆ ಮಾಡಿಕೊಂಡು ಉಪಸೇವೆಯನ್ನು ಪ್ರಸ್ತುತ ಆರ್ಥಿಕ ವರ್ಷ ಆಯ್ಕೆ ಮಾಡಿ, ಬಿಲ್‌ನಲ್ಲಿರುವ ಮೊತ್ತವನ್ನು ಹಾಗೂ ಕಡ್ಡಾಯವಾಗಿ ’ಎಸ್’ ನಂಬರ್‌ನ್ನು ಮತ್ತು ಡೋರ್ ನಂಬರನ್ನು ನಮೂದಿಸಿ ಸ್ವಯಂ ಚಲನ್ ಸೃಜಿಸಿ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸ ಬಹುದು.

ಕುಡಿಯುವ ನೀರಿನ ಶುಲ್ಕ (ನೀರಿನ ಬಳಕೆದಾರರ ಬಿಲ್)ನ್ನು ಪಾವತಿಸಲು: ಜಿಲ್ಲೆ ಮತ್ತು ನಗರ ಸ್ಥಳೀಯ ಸಂಸ್ಥೆಯ ಹೆಸರನ್ನು ಉಡುಪಿ ಎಂದು ಆಯ್ಕೆ ಮಾಡಿಕೊಂಡು ಸೇವೆಯ (ಹೆಡ್ ಆಫ್ ಅಕೌಂಟ್)ನೀರು ಸರಬರಾಜು ಮತ್ತು ಒಳಚರಂಡಿ ಬಳಕೆ ಶುಲ್ಕ ಆಯ್ಕೆ ಮಾಡಿಕೊಂಡು ಉಪಸೇವೆಯನ್ನು ಪ್ರಸ್ತುತ ಆರ್ಥಿಕ ವರ್ಷ ಆಯ್ಕೆ ಮಾಡಿ, ಬಿಲ್‌ನಲ್ಲಿರುವ ಮೊತ್ತವನ್ನು ಹಾಗೂ ಕಡ್ಡಾಯವಾಗಿ ’ಎಸ್’ ನಂಬರ್‌ನ್ನು ಮತ್ತು ಡೋರ್ ನಂಬರನ್ನು ನಮೂದಿಸಿ ಸ್ವಯಂ ಚಲನ್ ಸೃಜಿಸಿ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸ ಬಹುದು. ಸೆಸ್‌ಪೂಲ್ ವಾಹನದ ಶುಲ್ಕವನ್ನು ಪಾವತಿಸಲು: ಜಿಲ್ಲೆ ಮತ್ತು ನಗರ ಸ್ಥಳೀಯ ಸಂಸ್ಥೆಯ ಹೆಸರನ್ನು ಉಡುಪಿ ಎಂದು ಆಯ್ಕೆ ಮಾಡಿಕೊಂಡು ಸೇವೆಯ ವಾಹನ ಬಾಡಿಗೆಗಳು (ನೀರು ಸರಬರಾಜು ಒಳಚರಂಡಿ ನಿಧಿ) ಆಯ್ಕೆ ಮಾಡಿ ಕೊಂಡು ಉಪಸೇವೆಯಲ್ಲಿ ಸೆಸ್‌ಪೂಲ್ ವಾಹನ ಬಾಡಿಗೆ ಎಂದು ಆಯ್ಕೆ ಮಾಡಿ, ದರ ನಮೂದಿಸಿ, ಕಡ್ಡಾಯವಾಗಿ ಮೊಬೈಲ್ ನಂಬ್ರ ಮತ್ತು ಸಂಪೂರ್ಣ ವಿಳಾಸ ನಮೂದಿಸಿ ಸ್ವಯಂ ಚಲನ್ ಸೃಜಿಸಿ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ತಾಂತ್ರಿಕ ಸಮಸ್ಯೆಗಳೇನಾದರೂ ಕಂಡು ಬಂದಲ್ಲಿ ಇ-ಮೈಲ್: -itstaff_ulb­_udupi@yahoo.com -ಗೆ ಅಥವಾ-k2.helpdesk@Karntaka.gov.in ಅನ್ನು ಸಂಪರ್ಕಿಸಬಹುದು ಎಂದು ಉಡುಪಿ ನಗರಸಭೆಯ ಪೌರಾಯುಕ್ತರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News