ಮರಳು ಅಕ್ರಮ ಸಾಗಾಟ ಆರೋಪ: ಟಿಪ್ಪರ್ ವಶ

Update: 2021-05-11 16:59 GMT

ಪಡುಬಿದ್ರಿ: ಅನಧಿಕೃತವಾಗಿ ಮರಳನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಟಿಪ್ಪರೊಂದನ್ನು ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ಕಾಪು ತಹಶೀಲ್ದಾರ್ ಪ್ರತಿಭಾ ನೇತೃತ್ವದಲ್ಲಿ ಅಧಿಕಾರಿಗಳು  ಮಂಗಳವಾರ ಜಪ್ತಿ ಮಾಡಿದ್ದಾರೆ.

ಮಂಗಳೂರಿನಿಂದ ಬಳ್ಳುಂಜೆಗೆ ಪರವಾನಿಗೆ ಪಡೆದಿದ್ದ ಟಿಪ್ಪರ್ ಉಡುಪಿ ಜಿಲ್ಲೆ ಗಡಿ ಪ್ರವೇಶಿಸುವುದನ್ನು ಕಂಡು ಕಾರ್ಯಪ್ರವೃತ್ತರಾದ ತಹಸೀಲ್ದಾರ್ ಹೆಜಮಾಡಿ ಚೆಕ್ ಪೆಪೋಸ್ಟ್ ಬಳಿ ತಪಾಸಣೆ ನಡೆಸಿದಾಗ ಅಕ್ರಮವಾಗಿ ಮರಳು ಸಾಗಾಟ ಮಾಡುವ ಬಗ್ಗೆ ಮಾಹಿತಿ ಪಡೆದು ತಕ್ಷಣ ವಾಹನವನ್ನು ತಡೆದು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಬಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮಹೇಶ್  ಪ್ರಕರಣ ದಾಖಲಿಸಿ ವಾಹನ ವಶಕ್ಕೆ ಪಡೆದಿದ್ದಾರೆ. ವಶ ಪಡಿಸಿದ್ದ ಸೊತ್ತಿನ ಮೌಲ್ಯ  ಸುಮಾರು 50,800 ರೂ. ಆಗಿದೆ ಎಂದು ತಿಳಿಸಿದ್ದಾರೆ. ಕಾಪು ಕಂದಾಯ ನಿರೀಕ್ಷಕ ಸುಧೀರ್ ಶೆಟ್ಟಿ, ಗ್ರಾಮಕರಣಿಕರಾದ ಅರುಣ್ ಕುಮಾರ್, ವಿಜಯ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News