ಪಡುಬಿದ್ರಿ: 100 ಕುಟುಂಬಗಳಿಗೆ ಕೋವಿಡ್ ರಿಲೀಫ್ ಕಿಟ್ ವಿತರಣೆ

Update: 2021-05-12 12:16 GMT

ಪಡುಬಿದ್ರಿ: ಈದುಲ್ ಫಿತ್ರ್ ಅಂಗವಾಗಿ ಲಾಕ್‍ಡೌನ್‍ನ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಡ್ಸಾಲು ಗ್ರಾಮದ ಸರ್ವ ಧರ್ಮೀಯ ಅರ್ಹ 100 ಕುಟುಂಬಗಳಿಗೆ ಈದ್ ತರಕಾರಿ ಮತ್ತು ರೇಶನ್ ಆಹಾರ ಕಿಟ್ ಮತ್ತು ಕೋವಿಡ್ ರಿಲೀಫ್ ಕಿಟ್‍ಗಳನ್ನು ವಿತರಿಸಲಾಯಿತು.

ಪಡುಬಿದ್ರಿಯ ಸ್ಮ್ಯಾಶರ್ಸ್ ವೆಲ್‍ಫೇರ್ ಮತ್ತು ಸ್ಪೋರ್ಟ್ಸ್ ಕ್ಲಬ್ ಬೇಂಗ್ರೆ ವತಿಯಿಂದ ಈ ಕಿಟ್‍ಗಳನ್ನು ವಿತರಿಸಲಾಯಿತು. ಪಡುಬಿದ್ರಿಯ ಸ್ಮ್ಯಾಶರ್ಸ್ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಪಡುಬಿದ್ರಿ ಜುಮಾ ಮಸೀದಿಯ ಮುಖ್ರಿ ಹಾಜಿ ಫಾರೂಕ್ ದುವಾ ಮತ್ತು ಆಶಿರ್ವಚನದೊಂದಿಗೆ ಚಾಲನೆ ನೀಡಿದರು. ಸಂಸ್ಥೆಯು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸಮಾಜಮುಖಿ ಕೆಲಸ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಸಂಸ್ಥೆಯ ಅಧ್ಯಕ್ಷ ರಮೀಝ್ ಹುಸೇನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಗೌರವಾಧ್ಯಕ್ಷ ಕೌಸರ್ ಪಡುಬಿದ್ರಿ, ಪಿ.ಎ.ಹುಸೇನ್, ಲಿಯಾಖಾತ್ ಮುನ್ನ, ಸದಸ್ಯರಾದ ರಿಯಾಝ್, ನಸ್ರುಲ್ಲಾ, ಮುಸ್ತಾಕ್, ಶಾಮಿಲ್, ಅನ್ವರ್, ಫರಾಜ್, ಮಿಶಾಯಿಲ್, ನಿಝರ್, ಮುಝ್ಮುಲ್, ಆಸಿಫ್, ಜಹೀರ್, ಶಫೀಕ್, ಇಶಾಮ್, ಸಿಹಾದ್, ರಾಝಿಮ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರಝೀಕ್ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News