×
Ad

ಜನರ ಸಂಕಷ್ಟಗಳಿಗೆ ನೆರವಾಗಿ ಈದ್ ನೈಜ ಸಂದೇಶವನ್ನು ಸಾರೋಣ: ಅಬ್ದುಲ್ ಅಝೀಝ್ ಉದ್ಯಾವರ

Update: 2021-05-12 19:10 IST

ಉಡುಪಿ: ದೇಶದೆಲ್ಲೆಡೆ ಕೊರೋನ ಸಾಂಕ್ರಾಮಿಕ ರೋಗ ಹರಡಿ, ಲಾಕ್‌ಡೌನ್ ಆಗಿ ಜನರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನಾವೆಲ್ಲರೂ  ಸರಳವಾಗಿ ಈದ್ ಆಚರಿಸಿಕೊಂಡು, ಜಾತಿ, ಮತ ಭೇದವಿಲ್ಲದೆ ಜನರ ಸಂಕಷ್ಟಗಳನ್ನು ದೂರಮಾಡಲು ಶ್ರಮಿಸುವ ಮೂಲಕ ಈ ಬಾರಿಯ ಈದ್ ನ ನೈಜ ಸಂದೇಶವನ್ನು ಸಾರೋಣ ಎಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ಕರೆ ನೀಡಿದ್ದಾರೆ.

ನಾವೆಲ್ಲರೂ ಒಗ್ಗಟ್ಟಾಗಿ ಹಸಿದವರ ಹಸಿವೆಯನ್ನು ನೀಗಿಸೋಣ. ಕೊರೋನ ಸಾಂಕ್ರಾಮಿಕ ರೋಗ ಹಬ್ಬದಂತೆ ತಡೆಯಲು ನಮ್ಮಿಂದಾದ ಅಳಿಲು ಸೇವೆ ಸಲ್ಲಿಸೋಣ. ಜಾತಿ, ಮತ ಭೇದವಿಲ್ಲದೆ, ಸಕಲ ಗೌರವಾದಾರಗಳೊಂದಿಗೆ ಕೊರೋನದಿಂದ ಮೃತರಾದವರ ಮೃತದೇಹಗಳ ಅಂತ್ಯ ಸಂಸ್ಕಾರಗಳಿಗೆ ಹೆಗಲು ಕೊಡೋಣ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News