ಪಡುಬಿದ್ರಿ: ಪಡಿತರ ಸಾಮಾಗ್ರಿಗಳನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸುತ್ತಿರುವ ತಂಡ

Update: 2021-05-12 14:16 GMT

ಪಡುಬಿದ್ರಿ: ಇಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಪಡಿತರ ಸಾಮಾಗ್ರಿಗಳನ್ನು ಗ್ರಾಹಕರೊ ಕೊಂಡೊಯ್ಯಲು ವಾಹನ ವ್ಯವಸ್ಥೆ ಇಲ್ಲದೆ ಇರುವುದನ್ನು ಮನಗಂಡು ನೇರವಾಗಿ ಅವರ ಮನೆಗೆ ತಲುಪಿಸುವ ಕಾರ್ಯವನ್ನು ಗ್ರಾಮ ಪಂಚಾಯಿತಿ ಸದಸ್ಯರ ಎಂ.ಎಸ್. ಶಾಫಿ ನೇತೃತ್ವದ ತಂಡ ನಡೆಸುತ್ತಿದೆ.

ಕಳೆದ ಮೂರು ನಾಲ್ಕು ದಿನಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಸಾಮಾಗ್ರಿಗಳು ಸಿಗುತಿದ್ದರೂ ಲಾಕ್‍ಡೌನ್‍ನಿಂದ ವಾಹನವ ವ್ಯವಸ್ಥೆ ಸರಿಯಾಗಿ ಸಿಗುತಿರಲಿಲ್ಲ. ಇದರಿಂದ ಇಲ್ಲಿಗೆ ಬರುವ ಗ್ರಾಹಕರು ಎರಡು ಮೂರು ಕಿಮೀ ದೂರ ಸಾಮಾಗ್ರಿಗಳನ್ನು ಹೊತ್ತು ಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ನ್ಯಾಯಬೆಲೆ ಅಂಗಡಿಗೆ ಬರುವ ಗಾಹಕರ ಸಮಸ್ಯೆಯನ್ನು ಅರಿತ ಕಂಚಿನಡ್ಕ ವಾರ್ಡ್‍ನ ಸದಸ್ಯರಾದ ಶಾಫಿ ಎಂ.ಎಸ್, ಜ್ಯೋತಿ ಮೆನನ್ ನೇತೃತ್ವದ ತಂಡ ಟೆಂಪೋ ಮೂಲಕ ಉಚಿತವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಬುಧವಾರದಿಂದ ನಡೆಸುತಿದ್ದಾರೆ. ಇನ್ನು ಮೂರು ನಾಲ್ಕು ದಿನಗಳ ಕಾಲ ಈ ಸೇವೆಯನ್ನು ಉಚಿತವಾಗಿ ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲರಿಗೂ ನೀಡಲಾಗುವುದು ಎಂದು ಅವರು ಹೇಳಿದರು. 
ಇವರ ಈ ಸೇವೆಗೆ ವ್ಯಾಪಕ ಪ್ರಶಂಸೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಕಂಚಿನಡ್ಕ ನಿವಾಸಿ ರಮೇಶ್, ಲಾಕ್‍ಡೌನ್‍ನಿಂದ ಮನೆಗೆ ಕೊಂಡೊಯ್ಯಲು ವಾಹನದ ವ್ಯವಸ್ಥೆ ಇಲ್ಲ. ಇದರಿಂದ ಸಮಸ್ಯೆ ಆಗುತಿತ್ತು. ಈ ಸೇವೆ ನಿಜಕ್ಕೂ ಪ್ರಶಂಸನೀಯ ಎಂದರು. 

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋಧಾ, ಸದಸ್ಯರಾದ ಜ್ಯೋತಿ ಮೆನನ್, ರಮೀಝ್ ಹುಸೇನ್, ನಿಯಾಝ್, ಸಂದೇಶ್ ಶೆಟ್ಟಿ ಪಾದೆಬೆಟ್ಟು, ಸುನಂದಾ, ಕರ್ನಾಟಕ ರಕ್ಷಣಾ ವೇದಿಕೆಯ ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ನಿಝಾಮ್, ಹಕೀಂ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News