×
Ad

ಈದುಲ್ ಫ್ರಿತ್: ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ

Update: 2021-05-12 20:51 IST

ಉಡುಪಿ, ಮೇ 12: ಕೊರೋನಾ ಭೀತಿ ಹಾಗೂ ಲಾಕ್‌ಡೌನ್ ಮಧ್ಯೆ ಜಿಲ್ಲೆಯಾದ್ಯಂತ ಮುಸ್ಲಿಮರು ಮೇ 13ರಂದು ಸರಳ ರೀತಿಯಲ್ಲಿ ಈದುಲ್ ಫ್ರಿತ್ ಆಚರಿಸಲು ನಿರ್ಧರಿಸಿದ್ದು, ಮಸೀದಿಗಳು ಈಗಾಗಲೇ ಬಂದ್ ಆಗಿರುವುದರಿಂದ ಮನೆಗಳಲ್ಲಿಯೇ ಈದ್ ನಮಾಝ್ ನಿರ್ವಹಿಸಲಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಸೀದಿಗಳು ಈಗಾಗಲೇ ಬಂದ್ ಆಗಿರುವುದ ರಿಂದ ಸಾಮಾಹಿಕ ಹಬ್ಬ ಆಚರಣೆಗೆ ಅವಕಾಶ ಇಲ್ಲ. ಹಬ್ಬದ ಸಂದರ್ಭ ಕಾನೂನು-ಸುವ್ಯವಸ್ಥೆಗೆ ಸಮಸ್ಯೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯಾ ದ್ಯಂತ ಹೆಚ್ಚುವರಿ ಪೊಲೀಸ್ ಭದ್ರತೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಎರಡು ಕೆಎಸ್ಆರ್ಪಿ, 6 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿ, 11 ಪೊಲೀಸ್ ನಿರೀಕ್ಷಕರು, 50 ಎಸ್ಸೈಗಳು, 4 ಡಿವೈಎಸ್ಪಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಧಾರ್ಮಿಕ ಕೇಂದ್ರಗಳಿಗೆ ಸೂಕ್ತ ರಕ್ಷಣೆ, ಜಿಲ್ಲೆಯ ಆಯಕಟ್ಟಿನ ಜಾಗದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗುವುದು ಎಂದು ಎಸ್ಪಿ ವಿಷ್ಣುವರ್ಧನ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News