ಉಡುಪಿ: ಖಾಸಗಿ ಆಸ್ಪತ್ರೆಗಳ ನೋಡೆಲ್ ಅಧಿಕಾರಿಗಳಲ್ಲಿ ಬದಲಾವಣೆ
ಉಡುಪಿ, ಮೇ 12: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಸಲುವಾಗಿ ಸೋಂಕು ಬಾಧಿತ ವ್ಯಕ್ತಿಗಳು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಹಾಗೂ ತೀರ ಅಗತ್ಯವಿದ್ದಲ್ಲಿ ಅಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಮಾಡುವ ಸಲುವಾಗಿ ನೋಡೆಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಈಗಾಗಲೇ ಆದೇಶ ಹೊರಡಿಸಿದ್ದು, ಕೆಲವೊಂದು ಅನಿವಾರ್ಯ ಕಾರಣಗಿಂದ ಕೆಲವೊಂದು ಅಧಿಕಾರಿಗಳನ್ನು ಬದಲಾಯಿಸಿ ಪರಿಷ್ಕೃತ ಆದೇಶವನ್ನು ಹೊರಡಿಸಿದ್ದಾರೆ.
1.ಡಾ.ಎನ್.ಆರ್.ಆಚಾರ್ಯ ಆಸ್ಪತ್ರೆ ಕೋಟೇಶ್ವರ: ಈಗಾಗಲೇ ನೇಮಿಸಲಾದ ಪ್ರಭಾಕರ ಮಿತ್ಯಾಂತರ ಬದಲು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕ್ಷೇತ್ರ ಸಮನ್ವಯಾಧಿಕಾರಿ ಸದಾನಂದ (ಮೊ: 9480695379).
2.ಗಾಂಧಿ ಆಸ್ಪತ್ರೆ ಉಡುಪಿ: ಈ ಮೊದಲು ನೇಮಿಸಿದ ಸುಭಾಷ್ ರೆಡ್ಡಿ ಬದಲು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮನೋಜ್ (ಮೊ:9972336269).
3.ಮಿಷನ್ ಆಸ್ಪತ್ರೆ ಉಡುಪಿ: ಈ ಮೊದಲು ನೇಮಿಸಿದ ವಿಜಯಾ ಹೆಗ್ಡೆ ಬದಲು ಸಮಗ್ರ ಗಿರಿಜನ ಅಭಿವೃದ್ಧಿ ನಿಗಮದ ಯೋಜನಾ ಸಮನ್ವಯಾಧಿಕಾರಿ ದೂದ್‌ಪೀರ್ (ಮೊ: 9743954754).
ನಿಯೋಜಿತ ಅಧಿಕಾರಿಗಳು ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಯಾವುದೇ ತರವಾದ ಲೋಪಕ್ಕೆ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು. ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ 2005ರಡಿ ಹಾಗೂ ಎಪಿಡಮಿಕ್ ಡಿಸೀಸಸ್ ರೆಗ್ಯುಲೇಷನ್ ಆ್ಯಕ್ಟ್‌ನಂತೆ ನಿರ್ದಾಕ್ಷಿಣ್ಯ ಕ್ರಮ ಕೈಗಒಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.