'ತೌಕ್ತೆ' ಚಂಡಮಾರುತದ ಹಿನ್ನಲೆ: ಮಂಗಳೂರಿನಲ್ಲಿ ಭಾರೀ ಮಳೆ
Update: 2021-05-12 21:51 IST
ಮಂಗಳೂರು, ಮೇ 12: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ 'ತೌಕ್ತೆ' ಚಂಡಮಾರುತದ ಭೀತಿಯ ಮಧ್ಯೆ ಬುಧವಾರ ರಾತ್ರಿ ಮಂಗಳೂರಿನಲ್ಲಿ ಭಾರೀ ಮಳೆಯಾಗಿದೆ.
ನಗರ ಮತ್ತು ಹೊರವಲಯದ ಅನೇಕ ಕಡೆ ರಾತ್ರಿ ಸುಮಾರು 8:30ರಿಂದ ಸುಮಾರು ಅರ್ಧಗಂಟೆಯ ಕಾಲ ಗುಡುಗು, ಮಿಂಚು ಸಹಿತ ಬಿರುಸಿನ ಗಾಳಿ ಮಳೆಯಾಗಿದೆ.
ಮಳೆಯೊಂದಿಗೆ ಗಾಳಿಯೂ ಬಿರುಸು ಪಡೆದ ಕಾರಣ ಅಪಾಯದ ಪೂರ್ವಭಾವಿಯಾಗಿ ಹಲವು ಕಡೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಯಿತು.