×
Ad

ಮೇ 13: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಿಸಲಾಗುವುದಿಲ್ಲ

Update: 2021-05-12 22:42 IST

ಮಂಗಳೂರು, ಮೇ 12: ರಾಷ್ಟ್ರೀಯ ಚುಚ್ಚುಮದ್ದು ಲಸಿಕಾ ದಿನ (ಮೇ 13)ದಂದು ಮಕ್ಕಳ ಸಾಮಾನ್ಯ ಚುಚ್ಚು ಮದ್ದು ನೀಡುವ ಕಾರ್ಯಕ್ರಮವಿರುವುದಿಂದ ಗುರುವಾರ ಕೋವಿಡ್-19 ಲಸಿಕೆಯನ್ನು ವಿತರಿಸಲಾಗುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಕೋವಿಶೀಲ್ಡ್ ಲಸಿಕೆ ಲಭ್ಯವಿಲ್ಲ. ಲಸಿಕೆ ಲಭ್ಯವಾದ ನಂತರ ಶಿಬಿರವನ್ನು ಆಯೋಜಿಸಿ ದಿನಾಂಕಗಳನ್ನು ಪ್ರಕಟಿಸಲಾಗುವುದು. 18ರಿಂದ 44 ವಯಸ್ಸಿನವರಿಗೆ ಪ್ರಥಮ ಡೋಸ್ ಲಸಿಕೆಯನ್ನು ಮೊದಲೇ ನಿಗದಿಯಾದಂತೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ 4 ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆಯನ್ನು ನೀಡಲಾಗುವುದು.

COWINನಲ್ಲಿ ನೋಂದಣಿ ಮಾಡಿ ಅಪಾಯಿಂಟ್‌ಮೆಂಟ್ ಶೆಡ್ಯೂಲ್ ಬಳಿಕ ನಾಲ್ಕು ಡಿಜಿಟ್‌ನ ಸೆಕ್ಯುರಿಟಿ ಕೋಡ್ ಬಂದವರಿಗೆ ಮಾತ್ರ ಲಸಿಕೆ ತೆಗೆದುಕೊಳ್ಳಲು ಅವಕಾಶವಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News