ಮಂಗಳೂರು: ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
Update: 2021-05-12 22:42 IST
ಮಂಗಳೂರು, ಮೇ 12: ತಿರುವನಂತಪುರದ ಹವಾಮಾನ ಕೇಂದ್ರವು ನೀಡಿದ ಮುನ್ಸೂಚನೆಯಂತೆ ಮೇ 12ರಿಂದ ಮೇ 15ರವರೆಗೆ ಕರ್ನಾಟಕ,ಕೇರಳ ಮತ್ತು ಲಕ್ಷ ದ್ವೀದದ ಕರಾವಳಿಯಲ್ಲಿ ರಭಸವಾದ ಗಾಳಿಯಿಂದ ಸಮುದ್ರವು ಪ್ರಕ್ಷುಬ್ಧವಾಗುವ ಸಾದ್ಯತೆ ಇದೆ. ಹಾಗಾಗಿ ಮೀನುಗಾರರು ಈ ಅವಧಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚಿಸಿದೆ.
ದ.ಕ.ಜಿಲ್ಲೆಯ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕಿಳಿಯದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕಾ ದೋಣಿಗಳು ಮೇ 14ರ ರಾತ್ರಿಯೊಳಗೆ ದಡ ಸೇರಬೇಕು ಎಂದು ದ.ಕ.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.