ಪುತ್ತೂರು: ವಿದ್ವಾನ್ ಮಂಜುನಾಥ್ ಅವರ ದ್ವಿತಾಳ ಪ್ರಯೋಗ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲು

Update: 2021-05-12 17:40 GMT

ಪುತ್ತೂರು: ಭರತನಾಟ್ಯದ ಕೆಲವು ಪರಿಕಲ್ಪನೆಗಳನ್ನು ಇಟ್ಟುಕೊಂಡು ಎರಡು ಕೈಗಳಲ್ಲಿ ವಿಭಿನ್ನ ತಾಳ ಪ್ರಯೋಗಕ್ಕೆ ಆರ್ಯಭಟ ಪ್ರಶಸ್ತಿ ವಿಜೇತ ವಿದ್ವಾನ್ ಮಂಜುನಾಥ್ ಪುತ್ತೂರು ಅವರ ಹೆಸರು ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆಯಾಗಿದೆ.

ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿಯಾಗಿರುವ ಇವರು ಶಾಸ್ತ್ರೀಯ ಕಲಾಪ್ರಕಾರದಲ್ಲೇ ದ್ವಿತಾಳ ಪ್ರಯೋಗ ಮಾಡಿರುವ ಪ್ರಪ್ರಥಮ ದಾಖಲೆ ಇದಾಗಿದೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಏಕಕಾಲದಲ್ಲಿ ಒಬ್ಬ ವ್ಯಕ್ತಿಯ ಎರಡು ಕೈಗಳಲ್ಲಿ ಗರಿಷ್ಠ ತಾಳ ಪ್ರಾಯೋಗ ಪ್ರಸ್ತುತ ಪಡಿಸಿದ್ದು, 23 ನಿಮಿಷ, 52 ಸೆಕೆಂಡುಗಳಲ್ಲಿ 20 ವಿಭಿನ್ನ ರೀತಿಯ ದ್ವಿತಾಳ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಕಲಾಪ್ರಕಾರದಲ್ಲೇ ದ್ವಿತಾಳ ಪ್ರಯೋಗ ಇದೇ ಮೊದಲು.

ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ರಾಷ್ಟ್ರಮಟ್ಟದ ನಾಟ್ಯಮಯ್ಯೂರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಸಸ್ತಿ ಪಡೆದಿರುವ ಇವರು ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ‌್ಯಾಂಕ್ ಪಡೆದಿದ್ದಾರೆ. ಆಳ್ವಾಸ್ ಕಾಲೇಜು ಮೂಡಬಿದಿರೆ ಹಾಗೂ ಕಲ್ಲಡ್ಕ ಶ್ರೀ ರಾಮ ವಿದ್ಯಾಸಂಸ್ಥೆಯಲ್ಲಿ ಅರ್ಥಶಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಗುಲ್ಬರ್ಗದಲ್ಲಿ ಶ್ರೀ ಮಂಜುನಾಥ ನೃತ್ಯ ಕಲಾಶಾಲೆ ಸ್ಥಾಪಿಸಿ ಹಲವು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಭೇತಿ ನೀಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News