×
Ad

ರಾಜಸ್ತಾನದಲ್ಲಿ ಬ್ರಿಟನ್ ರೂಪಾಂತರಿತ ಕೋವಿಡ್ ಪ್ರಬೇಧ ಪತ್ತೆ: ರಾಜ್ಯ ಸರಕಾರ

Update: 2021-05-13 00:07 IST

ಜೈಪುರ: ರಾಜಸ್ತಾನದಿಂದ ಕಳಿಸಲಾಗಿರುವ ಕೊರೋನ ಸೋಂಕಿನ ಮಾದರಿಯಲ್ಲಿ ಬ್ರಿಟನ್ ರೂಪಾಂತರಿತ ಪ್ರಬೇಧ ಪತ್ತೆಯಾಗಿದೆ ಎಂದು ರಾಜ್ಯ ಸರಕಾರ ಬುಧವಾರ ಹೇಳಿದೆ.

ಜೈಪುರದ ಸವಾಯಿ ಮಾನ್ಸಿಂಗ್ ಆಸ್ಪತ್ರೆಯಲ್ಲಿ ಜೀನ್ಗಳ ಪರಂಪರಾಕ್ರಮ ನಿರ್ಧರಿಸುವ ಪ್ರಯೋಗಾಲಯ ಆರಂಭವಾಗಿದ್ದು ಈ ಪ್ರಯೋಗಾಲಯಕ್ಕೆ ರವಾನೆಯಾಗಿದ್ದ ಕೊರೋನ ಸೋಂಕಿತರ ಮಾದರಿಯಲ್ಲಿ ಬ್ರಿಟನ್ ರೂಪಾಂತರಿತ ಪ್ರಬೇಧ ಪತ್ತೆಯಾಗಿದೆ. ಸೋಂಕಿನ ಪ್ರಬೇಧ ಹಾಗೂ ಇತರ ವಿವರ ದೊರೆತರೆ ಚಿಕಿತ್ಸೆ ನಡೆಸಲು ಸುಲಭವಾಗುತ್ತದೆ ಎಂದು ರಾಜಸ್ತಾನದ ಆರೋಗ್ಯ ಸಚಿವ ರಘು ಶರ್ಮ ಹೇಳಿದ್ದಾರೆ.

ರಾಜಸ್ತಾನದಲ್ಲಿ ಕೊರೋನ ಸೋಂಕಿನ ಸಕ್ರಿಯ ಪ್ರಕರಣ 2.05 ಲಕ್ಷ ಗಡಿದಾಟಿದ್ದು ಇದುವರೆಗೆ 5,994 ಜನ ಸೋಂಕಿನಿಂದ ಮೃತಪಟ್ಟಿರುವುದಾಗಿ ರಾಜ್ಯದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News