×
Ad

ರಾಜಸ್ಥಾನ: ಸೊಸೆಯೊಂದಿಗೆ ಅಕ್ರಮ ಸಂಬಂಧ, ಮಗನನ್ನೇ ಕೊಂದ ತಂದೆ

Update: 2021-05-13 13:39 IST

ಜೈಸಲ್ಮೇರ್: ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂಧಿದ್ದ ವ್ಯಕ್ತಿಯೊಬ್ಬ ತನ್ನ ಮಗನನ್ನೇ ಕೊಂದಿರುವ ಘಟನೆ ನಾಚ್ನಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಆಸ್ಕಾಂದ್ರ ಗ್ರಾಮದಲ್ಲಿ ನಡೆದಿದೆ. ಕೊಲೆಗೀಡಾಗಿರುವ  ವ್ಯಕ್ತಿಯ ಪತ್ನಿ ಕೂಡ ಈ ಅಪರಾಧದಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

15 ದಿನಗಳ ಹಿಂದೆ ನಡೆದ ಹತ್ಯೆಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಇಬ್ಬರನ್ನೂ ಬುಧವಾರ ಬಂಧಿಸಲಾಗಿದೆ.  ಪೊಲೀಸರ ಪ್ರಕಾರ, ಹೀರಾ ಲಾಲ್ ಗೆ ನಿಂಬೆ ರಸವನ್ನು ನಿದ್ದೆ ಮಾತ್ರೆಗಳೊಂದಿಗೆ ನೀಡಲಾಯಿತು. ಆರೋಪಿ ಮುಖೇಶ್ ಕುಮಾರ್ ಹಾಗೂ  ಹೀರಾ ಲಾಲ್ ಅವರ ಪತ್ನಿಪಾರ್ಲೆ ಈ ಕೃತ್ಯದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.

ಮೇ 6 ರಂದು ಆಸ್ಕಾಂದ್ರ ನಿವಾಸಿ ಭೋಮರಾಜ್ ಅವರು ತಮ್ಮ ಕಿರಿಯ ಸಹೋದರ ಹೀರಾ ಲಾಲ್ ಎಪ್ರಿಲ್ 25 ರಂದು ನಿಧನರಾದರು ಹಾಗೂ  ಎಪ್ರಿಲ್ 26 ರಂದು ಸಮಾಧಿ ಮಾಡಲಾಗಿದೆ ಎಂದು ದೂರು ನೀಡಿದ್ದರು ಎಂದು   ಎಸ್ಪಿ ಅಜಯ್ ಸಿಂಗ್ ಹೇಳಿದ್ದಾರೆ.

ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಬಳಿಕ ಮೇ 6 ರಂದು ಸೆಕ್ಷನ್ 302, 201 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಶವವನ್ನು ಹೊರತೆಗೆಯಲಾಯಿತು ಹಾಗೂ  ಪೊಲೀಸರು ಸಾಂದರ್ಭಿಕ ಸಾಕ್ಷ್ಯಗಳನ್ನು ವಿಶ್ಲೇಷಿಸಿದರು. ಹೀರಾ ಲಾಲ್ ಅವರ ಪತ್ನಿ ಪಾರ್ಲೆ ಮೇಲೆ ಶಂಕೆ ವ್ಯಕ್ತಪಡಿಲಾಗಿತ್ತು.

ತನಿಖಾ ಅಧಿಕಾರಿಗಳು ಪಾರ್ಲೆ ಅವರನ್ನು ತೀವ್ರವಾಗಿ ವಿಚಾರಿಸಿದಾಗ, ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಳು. ಹೀರಾ ಲಾಲ್ ನಿರುದ್ಯೋಗಿಯಾಗಿದ್ದು ಮದ್ಯ ವ್ಯಸನಿಯಾಗಿದ್ದ. ಆಗಾಗ್ಗೆ ತನ್ನೊಂದಿಗೆ ಜಗಳವಾಡುತ್ತಿದ್ದ. ಇದರಿಂದಾಗಿ ತಮ್ಮ ಮಾವನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News