ಗಾಝಾ ಗಡಿ ಸಮೀಪ ಸೇನೆಯನ್ನು ಸನ್ನದ್ಧಗೊಳಿಸುತ್ತಿರುವ ಇಸ್ರೇಲ್

Update: 2021-05-13 10:53 GMT

ಜೆರುಸಲೆಂ: ಫೆಲೆಸ್ತೀನ್‌ ನ ಗಾಝಾ ಗಡಿ ಸಮೀಪ ಇಸ್ರೇಲ್ ತನ್ನ ಸೇನೆಯನ್ನು  ಗುರುವಾರ ಸನ್ನದ್ಧಗೊಳಿಸಲಾರಂಭಿಸಿದೆ.

ಇಸ್ರೇಲ್ ರಾಜಧಾನಿ ಟೆಲ್ ಅವೀವ್‍ನಲ್ಲಿ ರಾತ್ರಿಯುದ್ದಕ್ಕೂ ಸೈರನ್‍ಗಳು ಮೊಳಗುತ್ತಿದ್ದವಲ್ಲದೆ ಇಸ್ರೇಲ್‍ನ ಐರನ್ ಡೋಮ್ ಹಮಾಸ್ ಉಡಾಯಿಸಿದ ರಾಕೆಟ್‍ಗಳನ್ನು ಹೊಡೆದುರುಳಿಸುತ್ತಿದ್ದವು. ಗುರುವಾರ ಬೆಳಗ್ಗೆ ಇಸ್ರೇಲ್ ಮತ್ತೆ  ತನ್ನ ವಾಯು ದಾಳಿಯನ್ನು ಮುಂದುವರಿಸಿದೆ. ಗಾಝಾ ನಗರದ ಮಧ್ಯಭಾಗದಲ್ಲಿದ್ದ ಆರು ಮಹಡಿಗಳ ವಸತಿ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ಈ ದಾಳಿಗಳಿಗೆ ನೆಲಸಮವಾಗಿದೆ.

ಇಸ್ರೇಲಿಗರು ದೇಶದ ಅಲ್ಪಸಂಖ್ಯಾತ ಅರಬ್ ಸಮುದಾಯದ ವಿರುದ್ಧ ನಡೆಸುತ್ತಿರುವ ದಾಳಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾಗಿದೆ.

ಸೋಮವಾರ ಗಾಝಾ ಗುರಿಯಾಗಿಸಿ ಇಸ್ರೇಲ್‌ ರಾಕೆಟ್‌ ದಾಳಿ ನಡೆಸಿದ ನಂತರ ಕನಿಷ್ಠ 67 ಮಂದಿ ದಾಳಿಗಳಿಗೆ ಬಲಿಯಾಗಿದ್ದರೆ, ಇಸ್ರೇಲ್‍ನಲ್ಲಿ ದಾಳಿಗಳಿಗೆ ಏಳು ಮಂದಿ ಬಲಿಯಾಗಿದ್ದಾರೆ ಎಂದು ಅಲ್ಲಿನ ಸೇನೆ ತಿಳಿಸಿದೆ.

ಇಸ್ರೇಲ್ ಹಮಾಸ್‍ನ ಮಿಲಿಟರಿ ನೆಲೆಗಳ ಮೇಲೆ ದಾಳಿಗಳನ್ನು ಮುಂದುವರಿಸಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈಗಾಗಲೇ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರಿಗೆ ತಿಳಿಸಿದ್ದಾರೆದು ನೆತನ್ಯಾಹು ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News