ನಿಧನ: ಮೊಹಮ್ಮದ್ ಅನಿಝ್ ಶೇಕ್

Update: 2021-05-13 18:21 GMT

ಉಡುಪಿ, ಮೇ 13: ಮಂಗಳೂರು ಬೋಳಾರ ನಿವಾಸಿ ಗುಲಾಮ್ ಮೊಹಮ್ಮದ್ ಮೂಡಬಿದ್ರಿ ಎಂಬವರ ಪುತ್ರ ಮೊಹಮ್ಮದ್ ಅನಿಝ್ ಶೇಕ್ (48) ಅಲ್ಪ ಕಾಲದ ಅಸೌಖ್ಯದಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.

ಇಂದ್ರಾಳಿಯ ನಿಸಾರ್ ಅಹ್ಮದ್ ಅವರ ಅಳಿಯ ಆಗಿರುವ ಇವರು, ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರು ಎಲ್ಲರೊಂದಿಗೆ ಉತ್ತಮ ಹಾಗೂ ಸೌಹಾರ್ದಮಯ ಒಡನಾಟ, ಸಾಮಾಜಿಕ ಕಳಕಳಿ ಹೊಂದಿದ್ದರು.

ಇವರ ಅಂತ್ಯಕ್ರಿಯೆಯು ನಾಳೆ ಬೆಳಗ್ಗೆ ಇಂದ್ರಾಳಿಯ ನೂರಾಣಿ ಮಸೀದಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News