ಕೋವಿಡ್‌ ನಿಂದ ಬಾಧಿತರಾದವರ ಕಷ್ಟ, ನೋವುಗಳನ್ನು ನಾನು ಸಮಾನವಾಗಿ ಅನುಭವಿಸುತ್ತಿದ್ದೇನೆ: ಪ್ರಧಾನಿ ಮೋದಿ

Update: 2021-05-14 08:00 GMT

ನವದೆಹಲಿ: ಕಳೆದ ಕೆಲವು ದಿನಗಳಿಂದ ಕೋವಿಡ್‌ನಿಂದಾಗಿ ಜನರು ಅನುಭವಿಸಿದ ನೋವು ಮತ್ತು ಸಂಕಟಗಳನ್ನು ನಾನು ಅರ್ಥೈಸಿಕೊಂಡಿದ್ದೇನೆ ಮತ್ತು ಅನುಭವಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

"ಈ ಕೊರೋನ ವೈರಸ್ ಕಾರಣದಿಂದಾಗಿ, ನಾವು ನಮ್ಮ ಹತ್ತಿರದ ವ್ಯಕ್ತಿಗಳನ್ನು ಕಳೆದುಕೊಂಡಿದ್ದೇವೆ. ನಾಗರಿಕರು ಅನುಭವಿಸಿದ ನೋವು, ಅನುಭವ ಕಷ್ಟಗಳನ್ನು ನಾನೂ ಸಮಾನವಾಗಿ ಅನುಭವಿಸುತ್ತಿದ್ದೇನೆ" ಎಂದು ಪ್ರಧಾನಿ ಮೋದಿ ಮೋದಿ ರೈತರ ಕಾರ್ಯಕ್ರಮವೊಂದರಲ್ಲಿ ತಮ್ಮ ಆನ್‌ಲೈನ್ ಭಾಷಣದಲ್ಲಿ ಹೇಳಿದರು.

"ನಿಮ್ಮ ಪ್ರಧಾನ ಸೇವಕನಾಗಿ, ನಾನು ನಿಮ್ಮ ಪ್ರತಿಯೊಂದು ಭಾವನೆಯನ್ನು ಹಂಚಿಕೊಳ್ಳುತ್ತೇನೆ" ಎಂದು ಅವರು ಹೇಳಿದರು.

ದೇಶವು ಅದೃಶ್ಯ ಮತ್ತು ಆಕಾರವನ್ನು ಬದಲಾಯಿಸುವ ಶತ್ರುವಿನೊಂದಿಗೆ ವ್ಯವಹರಿಸುತ್ತಿದೆ. ವೈರಸ್ ನ ಅನೇಕ ರೂಪಾಂತರಿತ ತಳಿಗಳನ್ನು ಹುಟ್ಟುಹಾಕಲಾಗಿದೆ. ಇದು ಭಾರತದ ಮಾರಕ ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯ ಉಲ್ಬಣಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

"ಈ ಸಾಂಕ್ರಾಮಿಕವು, 100 ವರ್ಷಗಳಲ್ಲಿ ಕೆಟ್ಟದಾಗಿದೆ, ಜಗತ್ತನ್ನು ಪ್ರತಿ ಹಂತದಲ್ಲೂ ಪರೀಕ್ಷಿಸುತ್ತಿದೆ. ನಮ್ಮ ಮುಂದೆ ಅದೃಶ್ಯ ಶತ್ರು ಇದ್ದಾನೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News