ಭಾರೀ ಮಳೆ ಮುನ್ಸೂಚನೆ: ಕಾಸರಗೋಡು ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿ ಕಾರ್ಯಾರಂಭ
Update: 2021-05-14 14:09 IST
ಕಾಸರಗೋಡು, ಮೇ 14: ಅರಬಿ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ಭಾರೀ ಮಳೆ ಬೀಳುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ.
ಮಂಜೇಶ್ವರ, ಕಾಸರಗೋಡು, ಹೊಸದುರ್ಗ, ವೆಳ್ಳರಿಕುಂಡು ತಾಲೂಕುಗಳಲ್ಲಿ 24 ಗಂಟೆಗಳ ಕಾಲ ಕಾರ್ಯಾಚರಿಸುವ ನಿಯಂತ್ರಣ ಕೊಠಡಿಗಳು ಸಜ್ಜುಗೊಳಿಸಲಾಗಿದೆ.
ಮೀನುಗಾರಿಕೆ, ಪೊಲೀಸ್, ಕಂದಾಯ ಇಲಾಖೆಗಳು ಕರಾವಳಿ ಪ್ರದೇಶಗಳಲ್ಲಿ ಜಾಗರೂಕತೆ ನಡೆಸುತ್ತಿದ್ದಾರೆ.
ಉಪ್ಪಳ ಮುಸೋಡಿ ಕಡಪ್ಪುರಂ, ಕಾಪಿಲ್ ಬೀಚ್, ತೈಕಡಪ್ಪುರಂ ಸಹಿತ ಪ್ರದೇಶಗಳಲ್ಲಿ ಹೆಚ್ಚುವರಿ ಜಾಗೃತಿ ನಡೆಸಲಾಗುತ್ತಿದೆ.
ತಾಲೂಕು ಮಟ್ಟಗಳ ನಿಯಂತ್ರಣ ಕೊಠಡಿಗಳ ದೂರವಾಣಿ ಸಂಖ್ಯೆಗಳು ಇಂತಿವೆ:
ಮಂಜೇಶ್ವರ - 04998-244022
ಕಾಸರಗೋಡು - 04994-230021
ಹೊಸದುರ್ಗ - 0467-2204042
ವೆಳ್ಳರಿಕುಂಡ್ - 0467-2242320.
ಕಾಸರಗೋಡು ಜಿಲ್ಲಾ ಮಟ್ಟದ ತುರ್ತು ಕ್ರಮ ಕೇಂದ್ರದ ದೂರವಾಣಿ ಸಂಖ್ಯೆ: 04994-257700.