ಸ್ಪುಟ್ನಿಕ್ ವಿ ಕೊರೋನ ಲಸಿಕೆಯ ಪ್ರತಿ ಡೋಸ್ ಗೆ 995 ರೂ. ದರ ನಿಗದಿ

Update: 2021-05-14 09:52 GMT

ಹೊಸದಿಲ್ಲಿ: ಆಮದು ಮಾಡಿಕೊಂಡಿರುವ  ಕೊರೊನಾವೈರಸ್ ಲಸಿಕೆ ರಷ್ಯಾದ ಸ್ಪುಟ್ನಿಕ್ ವಿ ಭಾರತದಲ್ಲಿ  995.40 ರೂ. ವೆಚ್ಚವಾಗಲಿದೆ  ಎಂದು ಭಾರತದಲ್ಲಿ ಲಸಿಕೆ ತಯಾರಿಸುತ್ತಿರುವ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಇಂದು ತಿಳಿಸಿದೆ.

ಶೇಕಡಾ 91.6 ರಷ್ಟು ದಕ್ಷತೆ ಹೊಂದಿರುವ ಸ್ಪುಟ್ನಿಕ್ ವಿ, ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದ ಮೂರನೇ ಲಸಿಕೆಯಾಗಿದೆ.

ಲಸಿಕೆಯ ಮೊದಲ ಡೋಸ್ ಅನ್ನು ಇಂದು ಹೈದರಾಬಾದ್‌ನಲ್ಲಿ ನೀಡಲಾಯಿತು.

ಆಮದು ಮಾಡಿದ ಡೋಸ್‌ಗಳ ಬೆಲೆಯಲ್ಲಿ ಪ್ರತಿ ಡೋಸ್‌ಗೆ ಐದು ಶೇಕಡಾ ಜಿಎಸ್‌ಟಿ ಇರುತ್ತದೆ. ಭಾರತದಲ್ಲಿ ತಯಾರಿಸಿದ ಸ್ಪುಟ್ನಿಕ್ ವಿ ಡೋಸ್  ಅಗ್ಗವಾಗಬಹುದು

ಮುಂದಿನ ವಾರದಿಂದ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ವಿವಿಧ ರಾಜ್ಯಗಳಲ್ಲಿ ಲಸಿಕೆ ಕೊರತೆ ತೀವ್ರವಾಗಿದ್ದರಿಂದ ಮತ್ತು ಲಸಿಕೆ ಹಾಕಲು ನಿರ್ಬಂಧಗಳನ್ನು ತರಲಾಗಿದೆ ಎಂದು ಕೇಂದ್ರವು ಗುರುವಾರ ಹೇಳಿದೆ.

ಎಪ್ರಿಲ್ 13 ರಂದು ಭಾರತದಲ್ಲಿ ತುರ್ತು ಬಳಕೆಗಾಗಿ ಅನುಮತಿ ನೀಡಿದ ನಂತರ ಸ್ಪುಟ್ನಿಕ್ ವಿ ಲಸಿಕೆಯ ಆಮದು ಡೋಸ್ ಗಳ ಮೊದಲ ಸರಕು ಮೇ 1 ರಂದು ಭಾರತಕ್ಕೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News