×
Ad

ಮಂಗಳೂರು: ಕೋವಿಡ್ ಸೋಂಕಿಗೆ ಪೊಲೀಸ್ ಸಿಬ್ಬಂದಿ ಬಲಿ

Update: 2021-05-14 17:00 IST

ಮಂಗಳೂರು, ಮೇ 14: ಕೋವಿಡ್ ಸೋಂಕಿಗೊಳಗಾಗಿದ್ದ ಮಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ.

ಸಿದ್ದಪ್ಪ ಶಿಂಗೆ(51) ಮೃತಪಟ್ಟವರು. ಮೂಲತಃ ಬೆಳಗಾವಿಯ ಹುಕ್ಕೇರಿ ತಾಲೂಕಿನ ಹೊಸೂರಿನವರಾದ ಇವರು ನಿವೃತ್ತ ಸೈನಿಕರಾಗಿದ್ದರು. 2016ರಲ್ಲಿ ಸಶಸ್ತ್ರ ಮೀಸಲು ಪಡೆಗೆ ಸೇರ್ಪಡೆಗೊಂಡಿದ್ದ ಇವರು ಮಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕೋವಿಡ್ ಸೋಂಕಿಗೆ ಒಳಗಾಗಿದ್ದ ಇವರು ಕಳೆದೆರಡು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News