71 ದಿನಗಳಲ್ಲಿ 1.23 ಲಕ್ಷ ಮರಣ ಪ್ರಮಾಣಪತ್ರಗಳನ್ನು ನೀಡಲಾಗಿದೆ: ಗುಜರಾತ್‌ ಮಾಧ್ಯಮದ ಮುಖಪುಟದ ವರದಿ

Update: 2021-05-14 14:43 GMT
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್:‌ ಗುಜರಾತ್‌ ರಾಜ್ಯದಲ್ಲಿನ ಕೋವಿಡ್‌ ಸಾಂಕ್ರಾಮಿಕ ದುಸ್ಥಿತಿಗಳ ಕುರಿತಾದಂತೆ ಗುಜರಾನ್‌ ನ ಖ್ಯಾತ ದಿನಪತ್ರಿಕೆ 'ದಿವ್ಯ ಭಾಸ್ಕರ್‌' ವಿಮರ್ಶಾತ್ಮಕ ವರದಿ ಪ್ರಕಟಿಸಿದ್ದು, ಸರಕಾರದ ಅವ್ಯಸವಸ್ಥೆಯ ಕುರಿತಾದಂತೆಯೂ ಬೆಳಕು ಚೆಲ್ಲಿದೆ. 71 ದಿನಗಳಲ್ಲಿ ಗುಜರಾತ್‌ ನಲ್ಲಿ 1.23 ಲಕ್ಷ ಮರಣ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಆದರೆ ಅಧಿಕೃತವಾಗಿ ಕೇವಲ 4,218 ಸಾವಿನ ವರದಿಯನ್ನು ಸರಕಾರ ಮಾಡಿದೆ ಎಂದು ಮುಖಪುಟದಲ್ಲಿ ಪ್ರಕಟಿಸಲಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ನೀಡಲಾದ 58,000 ಕ್ಕೆ ವ್ಯತಿರಿಕ್ತವಾಗಿ ಈ ವರ್ಷ ಮಾರ್ಚ್ 1 ರಿಂದ ಮೇ 10 ರವರೆಗೆ 1.23 ಲಕ್ಷ ಮರಣ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಸಂಖ್ಯೆಗಳನ್ನು "ಮರೆಮಾಚಿದ" ರಾಜ್ಯ ಸರ್ಕಾರವು ಈಗ ತನ್ನದೇ ಆದ ಇಲಾಖೆಗಳ ಕಾರಣದಿಂದ ಬಹಿರಂಗಗೊಂಡಿದೆ ಎಂದು ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಪತ್ರಕರ್ತ ದೀಪಕ್ ಪಟೇಲ್ ಅವರು ಸುದ್ದಿ ವರದಿಯನ್ನು ಗುಜರಾತಿಯಿಂದ ಇಂಗ್ಲಿಷ್‌ಗೆ ಟ್ವಿಟರ್ ಥ್ರೆಡ್‌ನಲ್ಲಿ ಅನುವಾದಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ಅಂಕಿ ಅಂಶಗಳು ದ್ವಿಗುಣಗೊಂಡಿದ್ದರೂ, ಮಾರ್ಚ್ 1 ಮತ್ತು ಮೇ 10 ರ ನಡುವೆ ಕೇವಲ 4,218 ಕೋವಿಡ್ ಸಾವುಗಳು ಸಂಭವಿಸಿವೆ ಎಂದು ರಾಜ್ಯ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಉದಾಹರಣೆಗೆ, ಅಹಮದಾಬಾದ್ ನಗರದಲ್ಲಿ, 2020 ರಲ್ಲಿ 71 ದಿನಗಳ ಅವಧಿಯಲ್ಲಿ 7,786 ಮರಣ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಈ ವರ್ಷ ನಗರವು ಇದೇ ಅವಧಿಯಲ್ಲಿ 13,593 ಮರಣ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಅಹಮದಾಬಾದ್‌ನ ಅಧಿಕೃತ ಕೋವಿಡ್ ಸಾವಿನ ಸಂಖ್ಯೆ ಕೇವಲ 2,126 ಆಗಿದೆ. ಗುಜರಾತ್‌ನ ಇತರ ನಗರಗಳಿಗೂ ಇದೇ ರೀತಿಯ ಲೆಕ್ಕಾಚಾರಗಳನ್ನು ರೂಪಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News