ಮೇ 31 ರಂದು ಕೇರಳದಲ್ಲಿ ಮುಂಗಾರು ಆರಂಭ: ಐಎಂಡಿ

Update: 2021-05-14 15:28 GMT

  ಪುಣೆ : ಕೇರಳದಲ್ಲಿ ನೈಋತ್ಯ ಮಾನ್ಸೂನ್ ಮೇ 31 ರಂದು ಆರಂಭವಾಗುವ ನಿರೀಕ್ಷೆ ಇದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಪ್ರಕಟಿಸಿದೆ.

ದಕ್ಷಿಣ ರಾಜ್ಯದಲ್ಲಿಸಾಮಾನ್ಯವಾಗಿ  ಮಾನ್ಸೂನ್ ಋತು ಜೂನ್ 1 ರಂದು ಆರಂಭವಾಗುತ್ತದೆ. ಇದು ದೇಶದಾದ್ಯಂತ ನಾಲ್ಕು ತಿಂಗಳ ನೈಋತ್ಯ ಮಾನ್ಸೂನ್ ಋತುವಿನ ಆರಂಭವನ್ನು ಸೂಚಿಸುತ್ತದೆ.

ಐಎಂಡಿ ಈ ತಿಂಗಳ ಅಂತ್ಯದ ವೇಳೆಗೆ ಎರಡನೇ ಹಂತದ ದೀರ್ಘ ಶ್ರೇಣಿಯ ಮುನ್ಸೂಚನೆಯನ್ನು (ಎಲ್‌ಆರ್‌ಎಫ್) ನೀಡಲಿದೆ.  ಇದು ದೇಶದ ಏಕರೂಪದ ಪ್ರದೇಶಗಳಲ್ಲಿ ಮಳೆ ವಿತರಣೆಯನ್ನು ನಿರ್ದಿಷ್ಟಪಡಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News