ಮೇ 15: ಇಸ್ರೇಲ್ ಕ್ರೌರ್ಯದ ವಿರುದ್ಧ ಪೋಸ್ಟರ್ ಪ್ರದರ್ಶನ
Update: 2021-05-14 21:33 IST
ಮಂಗಳೂರು, ಮೇ 14: ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಭೀಕರ ಹತ್ಯಾಕಾಂಡದ ವಿರುದ್ಧ ಜಾಗತೀಕವಾಗಿ ವ್ಯಾಪಕ ಪ್ರತಿಭಟನೆ ನಡೆಸುವ ಸಲುವಾಗಿ ಎಸ್‌ವೈಎಸ್ ಕೇಂದ್ರ ಸಮಿತಿಯು ‘ಪ್ರತಿಭಟನಾ ಜ್ವಾಲೆ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಜಾಗತಿಕ ಪ್ರತಿರೋಧವನ್ನು ಬೆಂಬಲಿಸಿ ಇಸ್ರೇಲ್ ವಿರುದ್ಧ ನಡೆಸಲಾಗುವ ಅಭಿಯಾನದ ಭಾಗವಾಗಿ ಮೇ 15ರ ಬೆಳಗ್ಗೆ 10 ಗಂಟೆಗೆ ಪ್ರತೀ ಮನೆ ಮನೆಯಲ್ಲಿ ಇಸ್ರೇಲ್ ನ ಕ್ರೌರ್ಯದ ವಿರುದ್ಧ ಪೋಸ್ಟರ್ ಹಿಡಿದು ಪ್ರತಿಭಟನಾ ಪ್ರದರ್ಶನ ನಡೆಯಲಿದೆ.
ಪ್ರಥಮ ಹಂತದಲ್ಲಿ 10 ಲಕ್ಷ ಮನೆಗಳಲ್ಲಿ ಈ ಅಭಿಯಾನ ಕಾರ್ಯಕ್ರಮ ನಡೆಯಲಿದೆ. ಪ್ಯಾಲೆಸ್ತೀನ್‌ನೊಂದಿಗೆ ಭಾರತದ ಅವಿನಾಭಾವ ಸಂಬಂಧವನ್ನು ನೆನಪಿಸುವುದರೊಂದಿಗೆ ನಡೆಯುವ ಈ ಪ್ರತಿಭಟನೆಯನ್ನು ಯಶಸ್ಸುಗೊಳಿಸಲು ಎಸ್‌ವೈಎಸ್ ರಾಜ್ಯ ಮುಖಂಡ ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಕರೆ ನೀಡಿದ್ದಾರೆ.