×
Ad

ಕಾಂಗ್ರೆಸ್ ಕೋವಿಡ್ ಹೆಲ್ಪ್‌ಲೈನ್‌ನಿಂದ ಕಿಟ್ ವಿತರಣೆ

Update: 2021-05-14 22:26 IST

ಮಂಗಳೂರು, ಮೇ 14: ಕೊರೋನ, ಲಾಕ್‌ಡೌನ್‌ನಿಂದ ತತ್ತರಿಸಿರುವ ನಗರದ ವೆಲೆನ್ಸಿಯಾ, ಜಪ್ಪು ಬಪ್ಪಾಲ್ ಮತ್ತು ಸೂಟರ್‌ಪೇಟೆ ಪ್ರದೇಶದ ಅರ್ಹರನ್ನು ಗುರುತಿಸಿ ಕಾಂಗ್ರೆಸ್ ಕೋವಿಡ್ ಹೆಲ್ಪ್‌ಲೈನ್‌ನಿಂದ ವಿಧಾಾನ ಪರಿಷತ್ ಮಾಜಿ ಸದಸ್ಯ, ಎಐಸಿಸಿ ಕಾರ್ಯದರ್ಶಿ ಹಾಗೂ ಕೋವಿಡ್ ಹೆಲ್ಪ್‌ಲೈನ್ ಸಂಚಾಲಕ ಐವನ್ ಡಿಸೋಜರ ನೇತೃತ್ವದಲ್ಲಿ ಕಿಟ್ ವಿತರಿಸಲಾಯಿತು.

ಈ ಸಂದರ್ಭ ಜೆಪ್ಪುವೆಲೆನ್ಸಿಯಾ ಚರ್ಚಿನ ಸಹಾಯಕ ಧರ್ಮಗುರು ಲ್ಯಾನ್ಸಿ ಡಿಸೋಜ, ಮಾಜಿ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ನವೀನ್ ಡಿಸೋಜ, ಮಾಜಿ ಕಾರ್ಪೋರೇಟರ್‌ಗಳಾದ ಅಪ್ಪಿ, ನಾಗೇಂದ್ರ ಕುಮಾರ್, ಭಾಸ್ಕರ್ ರಾವ್, ಪವಿತ್ರಾ ಕರ್ಕೇರ, ಪಕ್ಷದ ನಾಯಕರಾದ ದುರ್ಗಾಪ್ರಸಾದ್, ಅಶಿತ್ ಪಿರೇರಾ, ದೀಕ್ಷಿತ್ ಅತ್ತಾವರ, ವಿವೇಕ್ ರಾಜ್ ಪೂಜಾರಿ, ಸತೀಶ್ ಪೆಂಗಳ್, ಮಹೇಶ್ ಕೋಡಿಕಲ್, ಆನಂದ್ ಸೋನ್ಸ್, ಹಬೀಬುಲ್ಲಾ, ತೆರೆಝಾ ಪಿಂಟೊ, ಅನಿಲ್ ಥೋರಸ್, ಪಿಯುಸ್ ಮೊಂತೆರೊ, ಜೇಮ್ಸ್ ಪ್ರವೀಣ್, ಚಿತ್ತರಂಜನ್ ಶೆಟ್ಟಿ, ಅವಿನಾಶ್ ಬಂಟ್ವಾಳ, ಸಲೀಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News