ಯುವಕ ನಾಪತ್ತೆ
Update: 2021-05-14 22:54 IST
ಉಳ್ಳಾಲ: ಯುವಕನೊಬ್ಬ ನಾಪತ್ತೆ ಆಗಿರುವ ಬಗ್ಗೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ.ನಗರ ಫಲಾಹ್ ಶಾಲೆ ಬಳಿ ಗುರುವಾರ ನಡೆದಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೇಖ್ ಝಾಹಿದ್ ನಿಝ್ಮಾನ್ (19) ನಾಪತ್ತೆ ಯಾದ ಯುವಕ.
ಗುರುವಾರ ಮೊಬೈಲ್ ವಿಚಾರ ದಲ್ಲಿ ಜಗಳವಾಡಿದ್ದ ಶೇಖ್ ಝಾಹಿದ್ ನಿಝ್ಮಾನ್ ಬಳಿಕ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆ ಆಗಿದ್ದಾರೆ ಎಂದು ಆತನ ತಂದೆ ನಝೀರ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಉಳ್ಳಾಲ ಪೊಲೀಸ್ ಠಾಣೆ 0824-2466269 ಕರೆ ಮಾಡಿ ತಿಳಿಸುವಂತೆ ಕೋರಲಾಗಿದೆ.