ಅಂತ್ಯಕ್ರಿಯೆಗೆ ಕೆಲವೇ ನಿಮಿಷವಿರುವಾಗ ಎದ್ದು ನಿಂತ ಕೋವಿಡ್ ಪೀಡಿತ ಮಹಿಳೆ

Update: 2021-05-15 10:52 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಒಂದು ವಿಲಕ್ಷಣ ಘಟನೆಯೊಂದರಲ್ಲಿ  ಬಾರಾಮತಿಯ ಮುಧಲೆ ಗ್ರಾಮದ, 76 ವರ್ಷದ ಮಹಿಳೆ ಕೋವಿಡ್ ನಿಂದ ಮೃತಪಟ್ಟಿದ್ದಾಳೆಂದು ನಂಬಿ ಕುಟುಂಬದವರು ಅಂತ್ಯಕ್ರಿಯೆಗೆ ತಯಾರಿ ನಡೆಸುತ್ತಿದ್ದಾಗ ಮಹಿಳೆ ಎದ್ದುನಿಂತಿರುವ ಒಂದು ವಿಲಕ್ಷಣ ಘಟನೆಯೊಂದು ವರದಿಯಾಗಿದೆ.

ಮಹಿಳೆಯನ್ನು ಶಕುಂತಲಾ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಮಹಿಳೆ ಕೆಲವು ದಿನಗಳ ಹಿಂದೆ ಕೋವಿಡ್ -19 ಸೋಂಕಿಗೆ ತುತ್ತಾಗಿದ್ದರು. ಮನೆಯಲ್ಲಿ ಪ್ರತ್ಯೇಕವಾಗಿದ್ದರು. ಆದರೆ ವೃದ್ಧಾಪ್ಯದಿಂದಾಗಿ ಆಕೆಯ ಸ್ಥಿತಿ ಹದಗೆಟ್ಟಿತು, ಹೀಗಾಗಿ  ಕುಟುಂಬದವರು ಮಹಿಳೆಯನ್ನು ಬಾರಾಮತಿಯ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದರು.

ಮೇ 10 ರಂದು ವೃದ್ಧ ಮಹಿಳೆಯನ್ನು ಖಾಸಗಿ ವಾಹನದಲ್ಲಿ ಬಾರಾಮತಿಗೆ ಕರೆದೊಯ್ಯಲಾಯಿತು. ಕುಟುಂಬವು ಬಾರಾಮತಿಯಲ್ಲಿ ಆಸ್ಪತ್ರೆಯ ಹಾಸಿಗೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರು ಕಾರಿನಲ್ಲಿ ಕಾಯುತ್ತಿದ್ದಾಗ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದು, ದೇಹದ ಚಲನೆಯೂ ನಿಂತುಹೋಗಿತ್ತು.

ಮಹಿಳೆ ಮೃತಪಟ್ಟಿದ್ದಾಳೆ ಎಂದು ಭಾವಿಸಿದ ಕುಟುಂಬದವರು ತಮ್ಮ ಸಂಬಂಧಿಕರಿಗೆ ಅಂತಿಮ ವಿಧಿಗಳ ಬಗ್ಗೆ ಮಾಹಿತಿ ನೀಡಿದರು.

ಕುಟುಂಬವು ವೃದ್ದೆಯನ್ನು ಮನೆಗೆ ಕರೆದುಕೊಂಡು ಹೋಗಿ ಶವ ಸಂಸ್ಕಾರಕ್ಕೆ ಸಿದ್ಧತೆ ಆರಂಭಿಸಿತು. ಸಾವಿಗೆ ಸಂಬಂಧಿಕರು ಶೋಕಿಸುತ್ತಿದ್ದಂತೆ, ಮಹಿಳೆ ಎದ್ದು ಕುಳಿತಾಗ ಎಲ್ಲರಿಗೂ ಅಚ್ಚರಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News