ಉಳ್ಳಾಲ ; ತೀವ್ರಗೊಂಡ ಕಡಲಿನಬ್ಬರ; 25ಕ್ಕೂ ಹೆಚ್ಚು ಮನೆಮಂದಿ ಸ್ಥಳಾಂತರ
Update: 2021-05-15 16:10 IST
ಉಳ್ಳಾಲ : ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲಿನಬ್ಬರ ತೀವ್ರಗೊಂಡ ಹಿನ್ನೆಲೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರಿಂದ, ಜನರನ್ನು ಸ್ಥಳಾಂತರಗೊಳಿಸಲಾಗಿದೆ.
ತಾತ್ಕಾಲಿಕವಾಗಿ ತಂಗಲು, ಬಿಲಾಲ್ ಜುಮಾ ಮಸೀದಿ ಅದೀನದ, ದಾರುಸ್ಸಲಾಂ ಮದರಸದಲ್ಲಿ ವ್ಯವಸ್ತೆಗೊಳಿಸಲಾಗಿದ್ದು, ಗಂಜಿಕೇಂದ್ರ ಸ್ಥಾಪಿಸಲಾಗಿದೆ. ಕಾರ್ಯಾಚರಣೆಯಲ್ಲಿ. ಎಸ್ ವೈ ಎಸ್ ಇಸ್ವಾಬ ಟೀಮ್ ತಲಪಾಡಿ ಇತರ ಸಂಘಟನೆ ಕಾರ್ಯಕರ್ತರು ಸಕ್ರೀಯವಾಗಿ ನೆರವಾದರು ಎಂದು ಸ್ಥಳೀಯರು ತಿಳಿಸಿದ್ದಾರೆ.