ಮಾನಸಿಕ ಆರೋಗ್ಯ ಜಾಗೃತಿಗೆ ಹಿಂದೂಜಾ ಫೌಂಡೇಷನ್ ನೆರವು
ಮಂಗಳೂರು: ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮುಂದಿನ ವಾರ ಹಮ್ಮಿಕೊಂಡಿರುವ ಜಾಗತಿಕ ವರ್ಚುವಲ್ ಶೃಂಗವನ್ನು ಶತಮಾನದಷ್ಟು ಹಳೆಯದಾದ ಹಿಂದೂಜಾ ಫೌಂಡೇಷನ್ ಪ್ರಾಯೋಜಿಸಿದೆ.
ಚೋಪ್ರಾ ಫೌಂಡೇಷನ್, ಜಾನ್ ಡಬ್ಲ್ಯು ಬ್ರಿಕ್ ಮಾನಸಿಕ ಆರೋಗ್ಯ ಪ್ರತಿಷ್ಠಾನ ಮತ್ತು ಸಿಜಿ ಕ್ರಿಯೇಟಿವ್ಸ್ ಸಹಯೋಗದಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ "ಈ ಜಗತ್ತಿನಲ್ಲಿ ಯಾರೊಬ್ಬರೂ ಒಂಟಿಯಲ್ಲ" ಎಂಬ ಧ್ಯೇಯದ ವರ್ಚುವಲ್ ಜಾಗತಿಕ ಶೃಂಗದಲ್ಲಿ 3 ಗಂಟೆ ಅವಧಿಯ ಸ್ಪಾಟ್‍ಲೈಟ್ ಕಾರ್ಯಕ್ರಮವನ್ನು ಹಿಂದೂಜಾ ಫೌಂಡೇಷನ್ ಪ್ರಾಯೋಜಿಸಿದ್ದು, ಹಿಂದೂಜಾದ ಆಲ್ಕೆಮಿಕ್ ಸೋನಿಕ್ ಎನ್ವಿರಾನ್‍ಮೆಂಟ್ ಇದನ್ನು ನಿರ್ವಹಿಸಲಿದೆ.
ಮನಸ್ಸಿನ ಪ್ರತಿಫಲನ, ಗ್ರಹಿಸುವಿಕೆ ಮತ್ತು ವಿಚಾರ ವಿನಿಮಯದ ಮನಸ್ಥಿತಿಗಳನ್ನು ಆಹ್ವಾನಿಸಲು ವಿನ್ಯಾಸಗೊಳಿಸಲಾಗಿರುವ ಬಹು ಸಂವೇದನೆಗಳ ಆಳವಾದ ಆಲಿಸುವ ಅನುಭವ ಸೃಷ್ಟಿಸಲು 'ಸ್ಪಾಟ್‍ಲೈಟ್ ಇಂಡಿಯಾ' ಹೆಸರಿನ ಕಾರ್ಯಕ್ರಮದಲ್ಲ್ಲಿ ಜನಪ್ರಿಯ ವಾಗ್ಮಿಗಳಾದ ಸದ್ಗುರು ಮತ್ತು ಅಭಯ್ ಡಿಯೋಲ್ ಅವರೂ ಸೇರಿದಂತೆ ಅನೇಕ ಖ್ಯಾತನಾಮರು ಮಾತನಾಡಲಿದ್ದಾರೆ ಎಂದು ಹಿಂದೂಜಾ ಗ್ರೂಪ್‍ನ ಸಹ-ಅಧ್ಯಕ್ಷ ಮತ್ತು ಹಿಂದೂಜಾ ಫೌಂಡೇಷನ್‍ನ ಟ್ರಸ್ಟಿ ಗೋಪಿಚಂದ್ ಪಿ. ಹಿಂದೂಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಚುವಲ್ ಶೃಂಗಸಭೆ ಮೇ 21ರ ಸಂಜೆ 6.30ಕ್ಕೆ ಫೇಸ್‍ಬುಕ್, ಯೂಟ್ಯೂಬ್ ಮತ್ತು ಇತರ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರವಾ ಗಲಿದೆ. ಈ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸುವವರು ತಮ್ಮ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಕಾಯ್ದುಕೊಳ್ಳಲು ನೆರವಾಗುವ ಉಚಿತ ಆನ್‍ಲೈನ್ ಪರಿಕರಗಳನ್ನು
'ಇಡೀ ಜಗತ್ತು ಸದ್ಯಕ್ಕೆ ಅನಿಶ್ಚಿತತೆಯಿಂದ ಜೀವಿಸುತ್ತಿದೆ. ಮನುಕುಲದ ಇತಿಹಾಸದಲ್ಲಿನ ಅತ್ಯಂತ ಕಠಿಣ ಸಮಯದಲ್ಲಿ ನಾವು ಹಾದು ಹೋಗುತ್ತಿದ್ದೇವೆ. ಈ ರೀತಿಯ ಬಿಕ್ಕಟ್ಟಿನಲ್ಲಿ, ನಮ್ಮ ದೈಹಿಕ ಆರೋಗ್ಯವು ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಗಮನ ಕೇಂದ್ರೀಕರಿಸಲು ಇದು ನೆರವಾಗಲಿದೆ ಎಂದು ಹಿಂದೂಜಾ ಪ್ರತಿಷ್ಠಾನದ ಅಧ್ಯಕ್ಷ ಪಾಲ್ ಅಬ್ರಹಾಂ ಹೇಳಿದ್ದಾರೆ.