×
Ad

ದ.ಕ.ಜಿಲ್ಲಾದ್ಯಂತ ಮನೆ ಮನೆಗಳಲ್ಲಿ ಸಿಐಟಿಯು ಪ್ರತಿಭಟನಾ ಪ್ರದರ್ಶನ

Update: 2021-05-15 18:10 IST

ಮಂಗಳೂರು, ಮೇ 15: ಎಲ್ಲಾ ಕಾರ್ಮಿಕರ ಬ್ಯಾಂಕ್ ಖಾತೆಗೆ ಮೇ 1ರಿಂದ ಅನ್ವಯವಾಗುವಂತೆ ಕೋವಿಡ್ ಪರಿಹಾರ ಧನದ ಹಣ ಜಮೆ ಮಾಡಬೇಕು. ಕೋವಿಡ್ ಸಂದರ್ಭ ಶೈಕ್ಷಣಿಕ ಮತ್ತು ಪಿಂಚಣಿ, ಮದುವೆ, ವೈದ್ಯಕೀಯ ಇತ್ಯಾದಿಯ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲೂ ಮೇ 30ವರೆಗೆ ವಿಸ್ತರಿಸಲಾದ ಅವಧಿಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ಶನಿವಾರ ಸಿಐಟಿಯು ನೇತೃತ್ವದ ಕಾರ್ಮಿಕರು ಸರಕಾರದ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಅರ್ಜಿ ಸಲ್ಲಿಸಿ ಇತ್ಯರ್ಥವಾಗದೆ ಉಳಿದಿರುವ ಎಲ್ಲಾ ಫಲಾನುಭವಿಗಳ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಪಡಿಸಿ ಅವರ ಖಾತೆಗೆ ಹಣ ಜಮೆ ಮಾಡಬೇಕು. ಕೋವಿಡ್ ಎರಡನೇ ಅಲೆಯಿಂದ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಉಚಿತ ಲಸಿಕೆಯನ್ನು ಕಾಲ ಮಿತಿಯಲ್ಲಿ ಹಾಕಲು ಕ್ರಮವಹಿಸಬೇಕು. ಕೋವಿಡ್-19ರ ಸೋಂಕಿನಿಂದ ಮೃತಪಟ್ಟ ನೋಂದಾಯಿಸಿದ ಪ್ರತಿ ಕಟ್ಟಡ ಕಾರ್ಮಿಕನ ಕುಟುಂಬಕ್ಕೆ 10 ಲಕ್ಷ ರೂ. ವಿಶೇಷ ಪರಿಹಾರ ಧನ ಪ್ರಕಟಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆದಿದೆ.

ಸಿಐಟಿಯು ಅಧೀನದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ರಿ)ನ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ವಸಂತ ಆಚಾರಿ ಮತ್ತಿತರರು ಪ್ರತಿಭಟನಾ ಪ್ರದರ್ಶನದ ನೇತೃತ್ವ ವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News