×
Ad

​ಕೋವಿಡ್ ವಾರಿಯರ್ಸ್‌ಗಳಿಗೆ ಮೊಟ್ಟೆ, ಹಾಲು ಒದಗಿಸಲು ಕಾಂಗ್ರೆಸ್ ಆಗ್ರಹ

Update: 2021-05-15 18:11 IST

ಮಂಗಳೂರು, ಮೇ 15: ಕೊರೋನ ವಾರಿಯರ್‌ಗಳಾಗಿ ಕಾರ್ಯನಿರ್ವಸುತ್ತಿರುವವರಿಗೆ ಮಧ್ಯಾಹ್ನ ಹಾಲು ಮತ್ತು ಮೊಟ್ಟೆ ನೀಡುವಂತೆ ಹಾಗೂ ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಇನ್ನಷ್ಟು ಮಂದಿಗೆ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಕೋವಿಡ್ ಹೆಲ್ಪ್‌ಲೈನ್ ಸಭೆ ಆಗ್ರಹಿಸಿದೆ.

ಶನಿವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕೋವಿಡ್ ಹೆಲ್ಪ್‌ಲೈನ್ ಸಭೆಯಲ್ಲಿ ಈ ಆಗ್ರಹ ಮಾಡಲಾಗಿದೆ.

ಲಸಿಕೆಯಲ್ಲಿ ವಿಳಂಬ ಉಂಟಾದ ಕಾರಣ ಸಮಸ್ಯೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಮನೆಗಳಿಗೆ ತೆರಳಿ ಲಸಿಕೆ ನೀಡಲು ಸರಕಾರ ಮುಂದಾಗಬೇಕು.ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯನ್ನು ಶೀಘ್ರ ನಿವಾರಿಸಬೇಕು ಎಂದು ಸಭೆ ಒತ್ತಾಯಿಸಿದೆ.

ಸಭೆಯಲ್ಲಿ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ನಿತ್ಯಾನಂದ ಶೆಟ್ಟಿ, ಅಖಿಲ ಭಾರತ ಸಾಮಾಜಿಕ ಜಾಲತಾಣದ ಸಂಯೋಜಕಿ ಶೆರಿಲ್ ಶೆರಿನ್, ಕಾರ್ಪೋರೇಟರ್‌ಗಳಾದ ಶಶಿಧರ್ ಹೆಗ್ಡೆ, ಕೇಶವ, ಜೆಸಿಂತಾ ವಿಜಯಾ ಅಲ್ಫ್ರೆಡ್, ಮಾಜಿ ಕಾರ್ಪರೇಟರ್‌ಗಳಾದ ಭಾಸ್ಕರ್ ರಾವ್, ಮುಹಮ್ಮದ್ ಕುಂಜತ್ತ್‌ಬೈಲ್, ಕಾಂಗ್ರೆಸ್ ನಾಯಕರುಗಳಾದ ವಿವೇಕ್‌ರಾಜ್ ಪೂಜಾರಿ, ಅಶಿತ್ ಪಿರೇರಾ, ಚಿತ್ತರಂಜನ್ ಶೆಟ್ಟಿ, ಶೋಭಾ ಕೇಶವ, ಪ್ರವೀಣ್ ಜೇಮ್ಸ್, ಹೊನ್ನಯ್ಯ, ಸತೀಶ್ ಪೆಂಗಳ್, ಆನಂದ್ ಸೋನ್ಸ್, ನಝೀರ್ ಬಜಾಲ್, ಹಬೀಬುಲ್ಲ ಕಣ್ಣೂರು, ಸಲೀಂ ಮುಕ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News