ಕೋಡಿ ಹೊಸಬೆಂಗ್ರೆಯಲ್ಲಿ ಕಡಲಕೊರೆತ: ತಹಶೀಲ್ದಾರ್ ಭೇಟಿ

Update: 2021-05-15 14:01 GMT

ಬ್ರಹ್ಮಾವರ, ಮೇ 15: ಚಂಡಮಾರುತದ ಪರಿಣಾಮದಿಂದ ಕೋಡಿ ಹೊಸ ಬೆಂಗ್ರೆಯಲ್ಲಿ ಕಡಲ ಆರ್ಭಟವೂ ಅತಿಯಾಗಿದ್ದು, ಪ್ರಕ್ಷ್ಯುಬ್ಧ ವಾತಾವರಣ ನಿರ್ಮಾಣವಾಗಿದೆ.

ಕಡಲ ಅಬ್ಬರದ ಅಲೆಯಿಂದ ಅನೇಕ ತೆಂಗಿನ ಮರಗಳು ಉರುಳಿದ್ದು ಅಲ್ಲದೆ ರಸ್ತೆ ಹಾಗೂ ಕೆಲವು ಮನೆ ಅಪಾಯದ ಅಂಚಿನಲ್ಲಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ಆಗಮಿಸಿ ಪರಿಶೀಲನ ನಡೆಸಿದರು.

ಮೇ 14ಕ್ಕಿಂತ ಇಂದು ಸಮುದ್ರ 100ಮೀಟರ್ ಮುಂದೆ ಬಂದಿದೆ. ಮೀನು ಗಾರರಿಗೆ ಈಗಾಗಲೇ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇನ್ನು ಎರಡು ದಿನ ಇದೇ ಪರಿಸ್ಥಿತಿ ಮುಂದುವರೆಯಲಿರುವುದರಿಂದ ಹೆಚ್ಚಿನ ನಿಗಾ ವಹಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಕೋಡಿ ಗ್ರಾಪಂ ಅಧ್ಯಕ್ಷ ಪ್ರಭಾಕರ್ ಮೆಂಡನ್, ಗ್ರಾಮ ಲೆಕ್ಕಿಗ ಗಿರೀಶ್, ಕೃಷ್ಣ ಪೂಜಾರಿ, ಗೀತಾ ಖಾರ್ವಿ, ಮಾಜಿ ಸದಸ್ಯ ಅಣ್ಣಪ್ಪ ಕುಂದರ್, ಲಕ್ಷ್ಮಣ ಸುವರ್ಣ, ಗ್ರಾಮ ಸಹಾಯಕಿ ಸರೋಜಾ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News