ತೌಕ್ತೆ ಚಂಡ ಮಾರುತ ಹಿನ್ನೆಲೆ: ಎಚ್‌ಆರ್‌ಎಸ್ ಉಡುಪಿ ತಂಡ ಭೇಟಿ
Update: 2021-05-15 19:33 IST
ಉಡುಪಿ, ಮೇ 15: ತೌಕ್ತೆ ಚಂಡ ಮಾರುತದ ಹಿನ್ನೆಲೆಯಲ್ಲಿ ಕರಾವಳಿ ಕಡಲ ತೀರದಲ್ಲಿ ವಿಪರೀತ ಗಾಳಿ ಮಳೆಯಾಗುತ್ತಿದ್ದು, ತುರ್ತು ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಎಚ್‌ಆರ್‌ಎಸ್ ಉಡುಪಿ ತಂಡ ಇಂದು ಸ್ಥಳ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಯಾವುದೇ ಸಂದರ್ಭದಲ್ಲಿ ಜನರ ಸೇವೆಗಾಗಿ ನಮ್ಮ ರೆಸ್ಕ್ಯೂ ರಿಲೀಫ್ ತಂಡ ಸರ್ವ ಸನ್ನದ್ಧವಾಗಿದೆ. ತುರ್ತು ಸಂದರ್ಭದಲ್ಲಿ ತಂಡ (ಮೊ-9844994978, 9448857812, 9945350023)ವನ್ನು ಸಂಪರ್ಕಿಸಬಹುದಾಗಿದೆ ಎಂದು ಎಚ್.ಆರ್.ಎಸ್ ನಾಯಕ ಬಿಲಾಲ್ ಮಲ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.