×
Ad

ಕೇರಳದ ಮೂವರು ಮೀನುಗಾರರ ರಕ್ಷಣೆ

Update: 2021-05-15 19:55 IST

ಮಂಗಳೂರು, ಮೇ 15: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿದ್ದ ಮೂವರು ಮೀನುಗಾರರನ್ನು ಕೋಸ್ಟ್ ಗಾರ್ಡ್ ಪಡೆ ಶುಕ್ರವಾರ ತಡರಾತ್ರಿ ರಕ್ಷಿಸಿದೆ.

ಕೇರಳದ ಕಣ್ಣೂರು ಕಡಲ ತೀರದಿಂದ ಸುಮಾರು 10 ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರಿಕಾ ಬೋಟ್ ಅಪಾಯದಲ್ಲಿ ಸಿಲುಕಿತ್ತು. ಎಂಜಿನ್ ಫೇಲ್ ಆಗಿ ಆಳ ಸಮುದ್ರದಲ್ಲಿ ಬೋಟ್ ಅತಂತ್ರ ಸ್ಥಿತಿಯಲ್ಲಿತ್ತು. ಚಂಡಮಾರುತ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದ್ದರೂ ಈ ಮೀನುಗಾರರು ಬೋಟ್‌ನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ತೌಕ್ತೆ ಚಂಡಮಾರುತದಿಂದ ಅರಬಿ ಸಮುದ್ರ ಅಬ್ಬರಿಸುತ್ತಿದ್ದು, ಮೂವರು ಮೀನುಗಾರರು ಅಪಾಯದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರಿನ ಐಸಿಜಿ ವಿಕ್ರಮ್ ಹೆಸರಿನ ಕೋಸ್ಟ್ ಗಾರ್ಡ್ ನೌಕೆಯ ಸಿಬ್ಬಂದಿ ವರ್ಗವು ಕಾರ್ಯಾಚರಣೆ ನಡೆಸಿತ್ತು.

ರಕ್ಷಿಸಲ್ಪಟ್ಟ ಮೂವರು ಮೀನುಗಾರರನ್ನು ಕೇರಳ ಕೋಸ್ಟ್‌ಗಾರ್ಡ್‌ಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News