ಒಟಿಪಿ ಪಡೆದು ಬ್ಯಾಂಕ್‌ನಿಂದ ವಂಚನೆ

Update: 2021-05-15 15:54 GMT

ಮಂಗಳೂರು, ಮೇ 15: ಮೊಬೈಲ್ ಮೂಲಕ ಒಟಿಪಿ ಪಡೆದು ವ್ಯಕ್ತಿಯೋರ್ವರ ಬ್ಯಾಂಕ್ ಖಾತೆಯಿಂದ 5.72 ಲ.ರೂ. ವರ್ಗಾಯಿಸಿ ವಂಚಿಸಿ ರುವ ಬಗ್ಗೆ ಮಂಗಳೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಬಲ್ಮಠದಲ್ಲಿರುವ ಎಸ್‌ಬಿಐ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಮೇ 13ರಂದು ರಾತ್ರಿ 8 ಗಂಟೆಗೆ ಎಸ್‌ಬಿಐ ಬ್ಯಾಂಕ್ ಖಾತೆಗೆ ಪಾನ್‌ಕಾರ್ಡ್ ಲಿಂಕ್ ಮಾಡುವ ಬಗ್ಗೆ ಸಂದೇಶ ಬಂದಿತ್ತು. ಅದರಲ್ಲಿದ್ದ ಲಿಂಕ್‌ನಲ್ಲಿ ಎಸ್‌ಬಿಐ ಯೋನೋ ಆ್ಯಪ್‌ನಂತೆ ತೋರುವ ವೆಬ್‌ಸೈಟ್ ತೆರೆದುಕೊಂಡಿತು. ಖಾತೆದಾರರು ಅದರಲ್ಲಿ ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಇಂಟರ್‌ನೆಟ್ ಬ್ಯಾಂಕಿಂಗ್ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ದಾಖಲಿಸಿದ್ದಾರೆ. ತಕ್ಷಣ ಆ ಖಾತೆದಾರರ ಮೊಬೈಲ್‌ಗೆ 8102716811ರಿಂದ ಕರೆ ಬಂತು. ಆತ ತನ್ನನ್ನು ಎಸ್‌ಬಿಐ ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡು ಖಾತೆದಾರರ ಮೊಬೈಲ್‌ಗೆ ಬರುವ ಒಟಿಪಿ ನೀಡುವಂತೆ ಕೇಳಿಕೊಂಡ. ಅದರಂತೆ ಖಾತೆದಾರರು ಅವರ ಮೊಬೈಲ್‌ಗೆ ಬಂದ ಒಟಿಪಿಯನ್ನು ಕರೆ ಮಾಡಿದಾತನಿಗೆ ನೀಡಿದರು. ಆ ಬಳಿಕ ಖಾತೆದಾರರ ಖಾತೆಯಿಂದ ಹಂತ ಹಂತವಾಗಿ 5.72 ಲ.ರೂ.ವನ್ನು ಮೋಸದಿಂದ ವರ್ಗಾಯಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News