ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

Update: 2021-05-15 15:55 GMT

ಮಂಗಳೂರು, ಮೇ 15: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಬೋಗಿಯ ಸೀಟೊಂದರಲ್ಲಿ ಸುಮಾರು 45ರಿಂದ 50 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಮೃತದೇಹ ಶುಕ್ರವಾರ ಪತ್ತೆಯಾಗಿದೆ.

5.3 ಅಡಿ ಎತ್ತರವಿದ್ದು ಕೃಶ ಶರೀರ, ಎಣ್ಣೆಗೆಂಪು ಮೈಬಣ್ಣ, ಉದ್ದ ಮುಖ, ಉದ್ದ ಮೂಗು ಹೊಂದಿದ್ದ ಈ ವ್ಯಕ್ತಿ ಗಡ್ಡ-ಮೀಸೆ ಬಿಟ್ಟಿದ್ದಾರೆ. ಕಂದು ಬಣ್ಣದ ಲುಂಗಿ ಧರಿಸಿದ್ದಾರೆ. ವಾರಸುದಾರರು ಇದ್ದರೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆ (0824- 2220559)ಯನ್ನು ಸಂಪರ್ಕಿಸುವಂತೆ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News