ಆಮ್ಲಜಕ ಉತ್ಪಾದನೆಗೆ ಬಳಸುವ 35 ಟನ್ ಝಿಯೋಲೈಟ್ ರೋಮ್ ನಿಂದ ಬೆಂಗಳೂರಿಗೆ ಸಾಗಿಸಿದ ಏರ್ ಇಂಡಿಯಾ

Update: 2021-05-15 18:20 GMT

ಹೊಸದಿಲ್ಲಿ, ಮೇ 15: ಆಮ್ಲಜನಕ ಉತ್ಪಾದನೆಗೆ ಬಳಸಲಾಗುವ 35 ಟನ್ಗಳಷ್ಟು ಝಿಯೋಲೈಟ್ ಖನಿಜವನ್ನು ಶನಿವಾರ ಎರಡು ವಿಮಾನಗಳಲ್ಲಿ ರೋಮ್ ನಿಂದ ಬೆಂಗಳೂರಿಗೆ ತರಲಾಯಿತು ಎಂದು ಏರ್ ಇಂಡಿಯಾ ಹೇಳಿದೆ. ಭಾರತ ಕೊರೋನ ಸೋಂಕಿನ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿದೆ. ಇದರಿಂದಾಗಿ ಹಲವು ರಾಜ್ಯಗಳ ಆಸ್ಪತ್ರೆಗಳು ಆರೋಗ್ಯ ಕಾರ್ಯಕರ್ತರು, ಲಸಿಕೆಗಳು, ಆಮ್ಲಜನಕ ಹಾಗೂ ಔಷಧಗಳ ಕೊರತೆ ಎದುರಿಸುತ್ತಿವೆ.

‘‘ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಝಿಯೋಲೈಟ್ ಸಕು ಸಾಗಾಟವನ್ನು ನಿರ್ವಹಿಸಲಿದೆ’’ ಎಂದು ಏರ್ ಇಂಡಿಯಾದ ಹೇಳಿಕೆ ತಿಳಿಸಿದೆ. ಇದಲ್ಲದೆ, ಮಂದಿನ ವಾರಗಳಲ್ಲಿ ಡಿಆರ್ಡಿಒಗಾಗಿ ಏರ್ ಇಂಡಿಯಾ ಜಗತ್ತಿನಾದ್ಯಂತದ ವಿವಿಧ ಸ್ಥಳಗಳಿಂದ ಝಿಯೋಲೈಟ್ ಖನಿಜವನ್ನು ಭಾರತಕ್ಕೆ ತರಲಿದೆ. ‘‘ಝಿಯೋಲೈಟ್ ಖನಿಜದ ಸಾಗಾಟಕ್ಕೆ ಮೇ 15ರಿಂದ 18ರ ನಡುವೆ ರೋಮ್ನಿಂದ ಬೆಂಗಳೂರಿಗೆ 7 ಚಾರ್ಟರ್ ವಿಮಾನಗಳನ್ನು ನಿಯೋಜಿಸಲಾಗಿದೆ. 

ಇದರ ಬಳಿಕ ಮೇ 19ರಿಂದ 22ರ ವರೆಗೆ ಕೊರಿಯಾದಿಂದ ಬೆಂಗಳೂರಿಗೆ 8 ಚಾರ್ಟರ್ ವಿಮಾನಗಳು ಝಿಯೋಲೈಟ್ ಖನಿಜವನ್ನು ತರಲಿದೆ’’ ಎಂದು ಅದು ತಿಳಿಸಿದೆ. ಅನಂತರ ನಾವು ಅಮೆರಿಕದಿಂದ ಇಡಬ್ಲುಆರ್ (ನೇವಾರ್ಕ್ ಲಿಬರ್ಟಿ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣ)ನಿಂದ ಅಸ್ತಿತ್ವದಲ್ಲಿರುವ ನಮ್ಮ ವಿಮಾನ ಹಾರಾಟ ವೇಳಾಪಟ್ಟಿಯಂತೆ ಮೇ 20ರಿಂದ 25ರ ವರೆಗೆ ಝಿಯೋಲೈಟ್ ಖನಿಜವನ್ನು ತರಲಿದ್ದೇವೆ. ಬಳಿಕದ ವಾರಗಳಲ್ಲಿ ಬ್ರುಶೆಲ್ಸ್, ಟೋಕಿಯೊ, ಮತ್ತೆ ಅಮೇರಿಕದಿಂದ ಝಿಯೋಲೈಟ್ ಖನಿಜವನ್ನು ವಿಮಾನದ ಮೂಲಕ ಭಾರತಕ್ಕೆ ತರಲಿದ್ದೇವೆ ಎಂದು ಏರ್ ಇಂಡಿಯಾ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News