ಕೊಣಾಜೆ: ಭಾರೀ ಗಾಳಿ, ಮಳೆ: ಮನೆಗಳಿಗೆ ಹಾನಿ

Update: 2021-05-16 07:26 GMT

ಕೊಣಾಜೆ : ಕಳೆದ ಎರಡು ದಿನಗಳಿಂದ ಚಂಡಮಾರುತದ ಪ್ರಭಾವದಿಂದ ಬೀಸುತ್ತಿರುವ ಭಾರೀ ಗಾಳಿ ಮಳೆಗೆ ಕೊಣಾಜೆ,‌ ಮಂಜನಾಡಿ‌,‌ ಮುಡಿಪು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ ಸಂಭವಿಸಿವೆ. ಹಲೆವೆಡೆ ಮರಗಳು ಉರುಳಿ ಬಿದ್ದಿವೆ.‌

ಕೊಣಾಜೆ ಗೋಪಾಲ ಶೆಟ್ಟಿಗಾರ್ ಎಂಬವರ ಮನೆಯ ಮೇಲ್ಛಾವಣಿಗೆ ಹಾನಿ ಸಂಭವಿಸಿದೆ. ಕೊಣಾಜೆಯ ಎಡ್ನ ಮರಿಯಾ ಡಿಸೋಜ ಎಂಬವರ ಮನೆಯ ಸಿಮೆಂಟ್ ಶೀಟ್ ಗಾಳಿಗೆ ಹಾರಿ ಹೋಗಿ ಹಾನಿ ಸಂಭವಿಸಿದೆ. ಪುಳಿಂಚಾಡಿಯ ಮೆರ್ಸಿನ್ ಡಿಸೋಜ ಎಂಬವರ ಮನೆಗೂ ಹಾನಿ ಸಂಭವಿಸಿದೆ. ಮಂಜನಾಡಿ ಗ್ರಾಮದ ಮರಾಠಿ ಮೂಲೆಯ ನವಾಝ್ ಎಂಬವರ ಮನೆಯ ಬಳಿ ಆವರಣಗೋಡೆ ಕುಸಿದು ಬಿದ್ದು ಮನೆಗೆ ಹಾನಿ ಸಂಭವಿಸಿದೆ.

ಭಾರೀ ಮಳೆಗೆ ನೇತ್ರಾವತಿ ನದಿ ನೀರಿನ ಮಟ್ಟವು ಏರಿಕೆಯಾಗಿದ್ದು, ಹರೇಕಳ ಬಳಿ ಸುಮಾರು 192 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹರೇಕಳ ಅಡ್ಯಾರ್ ಸೇತುವೆ ಮತ್ತು ಅಣೆಕಟ್ಟು ಕಾಮಗಾರಿಯು‌ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದೀಗ ಕಾಮಗಾರಿ‌ ಪ್ರದೇಶದಲ್ಲಿ‌ ನೀರಿನ ಮಟ್ಟ ಏಕಾಏಕಿ ಏರಿಕೆಯಾದ ಹಿನ್ನೆಲೆಯಲ್ಲಿ ‌ಕಾಮಗಾರಿ ಪರಿಕರವು ನೀರಿಗೆ ಕೊಚ್ಚಿಕೊಂಡು ಹೋಗಿವೆ. ಕಾಮಗಾರಿ ನಿರ್ಮಾಣದ ವೇಳೆ ಹಾಕಲಾಗಿದ್ದ ಮೋರಿ, ಕಬ್ಬಿಣದ ತುಂಡುಗಳು, ಸಿಮೆಂಟ್ ಗಳು ನೀರಿಗೆ ಕೊಚ್ಚಿ ಹೋಗಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳ ಮಾಹಿತು ನೀಡಿದ್ದಾರೆ.

ಅಲ್ಲದೆ ಇದೀಗ ಅಣೆಕಟ್ಟು ನಿರ್ಮಾಣದ ಜಾಗದಲ್ಲಿ ನದಿ‌ ನೀರಿನ ಮಟ್ಟ ಹೆಚ್ಚಾಗಿ ಹಾಗೂ ನೀರು ಕೂಡಾ ಶೇಖರಣೆಗೊಂಡು ಹರೇಕಳ ಜಂಕ್ಷನ್ ವರೆಗೂ ನೀರು ತುಂಬಿಕೊಂಡು ಅಪಾಯಮಟ್ಟದಲ್ಲಿ ಹರಿಯುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News