ಕಾಪು ಕಡಲಿನಲ್ಲಿ ಸಿಲುಕಿದ ಟಗ್ ಅಪಾಯದಲ್ಲಿ: ಸಹಾಯಕ್ಕಾಗಿ 9 ಸಿಬ್ಬಂದಿಗಳು ಮೊರೆ

Update: 2021-05-16 10:27 GMT

ಕಾಪು: ಕಾಪು ಸಮುದ್ರದಲ್ಲಿ ಟಗ್ ಸಿಲುಕಿ ಇದರಲ್ಲಿ 9 ಜನ ಸಿಬ್ಬಂದಿಗಳಿದ್ದು ಅಪಾಯದಲ್ಲಿದ್ದು, ಸಹಾಯಕ್ಕಾಗಿ ವೀಡಿಯೊ ಮೂಲಕ ಮನವಿ ಮಾಡಿದ್ದಾರೆ.

ಟಗ್ ನಲ್ಲಿ ಅಪಾರ ಪ್ರಮಾಣದ ಡೀಸೆಲ್ ಆಯಿಲ್ ಇದೆ ಎಂದು ತಿಳಿದು ಬಂದಿದ್ದು, ದೂರದ ಸಮುದ್ರದಲ್ಲಿ ಮೂರಿಂಗ್ ಸೆಂಟರ್ ಇದ್ದು ತೈಲ ಕಚ್ಚಾ ಸರಕು ಹೊತ್ತು ತರುವ ಬೃಹತ್ ಹಡಗುಗಳಿಗೆ ಈ ಟಗ್ ಗಳು ನೆರವು ನೀಡುವ ಕೆಲಸ ಮಾಡುತ್ತಿವೆ.

ನವಮಂಗಳೂರಿನ ಬಂದರಿನ ಹೊರ ವಲಯದಲ್ಲಿ ಆಂಕರ್ ಹಾಕಲಾಗಿತ್ತು. ಭಾರೀ ಗಾಳಿಗೆ ಆಂಕರ್ ತುಂಡಾಗಿ ಇದೀಗ ಕಾಪು ಸಮೀಪ ಅಪಘಾತಕ್ಕೀಡಾಗಿದೆ.

ಕೊಚ್ಚಿಯಿಂದ ಬರುವ ಹೆಲಿಕಾಪ್ಟರ್ ಮೂಲಕ ಅವರ ರಕ್ಷಣೆಗಾಗಿ ಜಿಲ್ಲಾ ಆಡಳಿತ ಸಿದ್ಧತೆ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಶನಿವಾರ ಪಡುಬಿದ್ರಿಯಲ್ಲಿ ಇನ್ನೊಂದು ಟಗ್ ಪತ್ತೆಯಾಗಿತ್ತು. ಅದರಲ್ಲಿದ್ದ 9 ಜನರ ಪೈಕಿ ಒಬ್ಬನ ಮೃತದೇಹ ನಿನ್ನೆ ಪತ್ತೆಯಾಗಿತ್ತು. ಇನ್ನೊಂದು ಮೃತದೇಹ ಇಂದು ಸಿಕ್ಕಿದೆ. ಇಬ್ಬರು ಈಜಿ ದಡ ಸೇರಿದ್ದಾರೆ. ಉಳಿದವರು ನಾಪತ್ತೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News