ಹೈದರಾಬಾದ್ ತಲುಪಿದ ಸ್ಪುಟ್ನಿಕ್ ವಿ ಲಸಿಕೆಯ 2ನೇ ಭಾಗ

Update: 2021-05-16 11:30 GMT

ಹೈದರಾಬಾದ್: ರಶ್ಯ ತಯಾರಿಸಿರುವ ಸ್ಪುಟ್ನಿಕ್ ವಿ ಲಸಿಕೆಯ ಎರಡನೇ ಭಾಗ ತೆಲಂಗಾಣ ರಾಜ್ಯದ ಹೈದರಾಬಾದ್ ನ ರಾಜೀವ್ ಗಾಂಧಿ  ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಿವಾರ ತಲುಪಿದೆ.

ಭಾರತದ ರೆಡ್ಡೀಸ್ ಲ್ಯಾಬೋರೇಟರೀಸ್ ಮೇ 14 ರಂದು ಶೇ.5ರಷ್ಟು ಜಿಎಸ್ ಟಿ ಯೊಂದಿಗೆ 948 ರೂ. ಬೆಲೆಯಲ್ಲಿ ಸ್ಪುಟ್ನಿಕ್ ಲಸಿಕೆಯನ್ನು ರಶ್ಯದಿಂದ ಆಮದು ಮಾಡಿಕೊಂಡಿದೆ.

ಭಾರತದ ಲಸಿಕಾ ಅಭಿಯಾನದಲ್ಲಿ ರಶ್ಯದ ಸ್ಪುಟ್ನಿಕ್ ಲಸಿಕೆಯು ಸೇರ್ಪಡೆಯಾಗಿದೆ. ಎರಡನೇ ಬ್ಯಾಚ್ ಅನ್ನು ಸಮಯಕ್ಕೆ ಸರಿಯಾಗಿ ಭಾರತಕ್ಕೆ ತಲುಪಿಸಲಾಗಿದೆ. ಈ ಲಸಿಕೆಯ ಸಾಮರ್ಥ್ಯವು  ಇಡೀ ವಿಶ್ವಕ್ಕೆ ಚಿರಪರಿಚಿತ ಎಂದು ಭಾರತದಲ್ಲಿರುವ ರಶ್ಯದ ರಾಯಭಾರಿ ನಿಕೊಲಾಯ್ ಕುಡಸೇವ್ ಅವರು ಟ್ವೀಟಿಸಿದ್ದಾರೆ.

ಮೇ 1ರಂದು ಸ್ಪುಟ್ನಿಕ್ ವಿ  ಲಸಿಕೆಯ ಮೊದಲ ಭಾಗ ಭಾರತಕ್ಕೆ ಆಗಮಿಸಿತ್ತು. ಮೊದಲ ಬ್ಯಾಚ್ ನಲ್ಲಿ 1.50 ಲಕ್ಷ ಡೋಸ್ ಗಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News