ಆಮ್ಲಜನಕ ಉತ್ಪಾದನೆಗೆ ಬಳಸುವ ಜಿಯೋಲೈಟ್ ರೋಮ್‌ನಿಂದ ಬೆಂಗಳೂರಿಗೆ ರವಾನೆ

Update: 2021-05-16 12:15 GMT
(Photo| EPS)

ಬೆಂಗಳೂರು: ಕರ್ನಾಟಕದ ಆಮ್ಲಜನಕದ ಕೊರತೆಯನ್ನು ನಿವಾರಿಸಲು ಸಹಾಯ ಮಾಡುವ ಮತ್ತೊಂದು ಕ್ರಮದಲ್ಲಿ, ಆಮ್ಲಜನಕದ ಉತ್ಪಾದನೆಯಲ್ಲಿ ಪ್ರಮುಖ ಅಂಶವಾಗಿರುವ ಒಟ್ಟು 34,200 ಕಿಲೋಗ್ರಾಂಗಳಷ್ಟು ಜಿಯೋಲೈಟ್ ರವಿವಾರ ಬೆಳಿಗ್ಗೆ ಎರಡು ಏರ್ ಇಂಡಿಯಾ ಸರಕು ವಿಮಾನಗಳ ಮೂಲಕ ರೋಮ್‌ನಿಂದ ಬೆಂಗಳೂರು ವಿಮಾನ ನಿಲ್ದಾಣವನ್ನು ತಲುಪಿತು.

ವಿಮಾನ ನಿಲ್ದಾಣದ ಏರ್ ಕಾರ್ಗೋ ಘಟಕವು ಮಧ್ಯಾಹ್ನದ ಹೊತ್ತಿಗೆ ಅವುಗಳನ್ನು ತೆರವುಗೊಳಿಸಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಒಂದು ವಿಮಾನವು ಬೆಳಿಗ್ಗೆ 6.45 ಕ್ಕೆ ತಲುಪಿದ್ದರೆ, ಎರಡನೆಯ ವಿಮಾನವು ಬೆಳಿಗ್ಗೆ 8 ರ ಸುಮಾರಿಗೆ ತಲುಪಿತು. ಮೊದಲ ವಿಮಾನವು 35 ಡ್ರಮ್‌ಗಳ ಜಿಯೋಲೈಟ್ ಅನ್ನು ಹೊತ್ತು ತಂದರೆ, ಎರಡನೆ ವಿಮಾನದಲ್ಲಿ  22 ಡ್ರಮ್‌ಗಳ ಖನಿಜವಿದೆ. ಅವುಗಳನ್ನು ಕೋಲಾದ ಮಾಲೂರಿನ ಟಾಟಾ ಅಡ್ವಾನ್ಸ್ಡ್ ಸಿಸ್ಟಂಸ್‌ಗೆ ಸಾಗಿಸಲಾಗುವುದು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಇಂತಹ ಇನ್ನೂ ಮೂರು ಸರಕುಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ  ಬರುವುದನ್ನು ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News