ಚೀನಾದಿಂದ ದಿಲ್ಲಿಗೆ ಬಂದಿಳಿದ 3,600 ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳು

Update: 2021-05-16 17:08 GMT
photo: whatsapp image

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ -19 ಬಿಕ್ಕಟ್ಟಿನ ಮಧ್ಯೆ ರವಿವಾರ ಮಧ್ಯಾಹ್ನ ಚೀನಾದಿಂದ ಹೊಸದಿಲ್ಲಿಗೆ ಆಕ್ಸಿಜನ್ ಸಾಂದ್ರಕಗಳ ಅತಿದೊಡ್ಡ ಸರಕು ರವಾನೆಯಾಗಿದೆ.

ಸುಮಾರು 100 ಟನ್ ತೂಕದ 3,600 ಕ್ಕೂ ಹೆಚ್ಚು ಆಮ್ಲಜನಕ ಸಾಂದ್ರಕಗಳ ಸರಕು ಚೀನಾದ ಹ್ಯಾಂಗ್‌ ಝೌ ವಿಮಾನ ನಿಲ್ದಾಣದಿಂದ ಬೋಯಿಂಗ್ 747-400 ವಿಮಾನದಲ್ಲಿ ಬಂದಿತು.

ಜಂಬೋ ಚಾರ್ಟರ್ ರವಿವಾರ ಮಧ್ಯಾಹ್ನ 3: 18 ಕ್ಕೆ ದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಬೊಲ್ಲೂರ್ ಲಾಜಿಸ್ಟಿಕ್ಸ್ ಇಂಡಿಯಾದ ರಾಷ್ಟ್ರೀಯ ಮಾರಾಟ ಮುಖ್ಯಸ್ಥ ಜಸ್ಪ್ರೀತ್ ಸಿಂಗ್ ಹೇಳಿದ್ದಾರೆ.

ಬಹುರಾಷ್ಟ್ರೀಯ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕಂಪನಿಯಾದ ಬೊಲ್ಲೂರ್ ಲಾಜಿಸ್ಟಿಕ್ಸ್ ಇಂಡಿಯಾ ಈ ಆಮದನ್ನು ಕಾರ್ಯಗತಗೊಳಿಸಿದೆ. ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯೊಂದಿಗೆ ನಿಕಟ ಸಮನ್ವಯದಲ್ಲಿ ಸಂಕೀರ್ಣವಾದ ವ್ಯವಸ್ಥಾಪನಾ ಸವಾಲುಗಳನ್ನು ಅದು ಜಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News