ಚಂಡಮಾರುತ: ಪಿಎಫ್‌ಐ ರೆಸ್ಕ್ಯೂ ತಂಡದಿಂದ ಕಾರ್ಯಾಚರಣೆ

Update: 2021-05-16 14:31 GMT

ಉಡುಪಿ, ಮೇ 16: ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಹಾನಿಗೀಡಾದ ಪ್ರದೇಶಗಳಲ್ಲಿ ಪಾಪ್ಯುಲರ್ ಫ್ರಂಟ್ ಉಡುಪಿ ರೆಸ್ಕ್ಯೂ ತಂಡದ ಸಸ್ಯರು ಕಾರ್ಯಾಚರಣೆ ನಡೆಸಿದರು.

ಮೂಳೂರು, ಮಲ್ಪೆ, ಕಾಪು, ಕೋಡಿ ಮುಂತಾದ ಕಡೆಗಳಲ್ಲಿ ಬ್ರಹತ್ ಗಾತ್ರದ ಮರಗಳು ರಸ್ತೆಗೆ ಉರುಳಿದ್ದು ಇದರಿಂದಾಗಿ ವಿದ್ಯುತ್ ವ್ಯತ್ಯಯ ಹಾಗೂ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ತಂಡದ ಸದಸ್ಯರು ಕಾರ್ಯಪ್ರವೃತ್ತರಾಗಿ ಮರಗಳನ್ನು ತೆರವುಗೊಳಿಸಿದರು.

ಅದೇ ರೀತಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆಯಿಂದಾಗಿ ಮನೆಯೊಳಗೆ ನೀರು ಹರಿದು ಬಂದಿದ್ದು ಅಲ್ಲಿಯ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತ ರಿಸಲು ತಂಡ ನೆರವಾಯಿತು. ಕಾಪು, ಬೆಳಪು, ಕನ್ನಂಗರ್ ಕೋಡಿ, ಮಲ್ಪೆ, ಹೊಡೆ ಮತ್ತು ಇತರ ಕೆಲವು ಕಡೆಗಳಲ್ಲಿ ಮಳೆಯಿಂದಾಗಿ ಉಂಟಾದ ಸಮಸ್ಯೆಗಳಿಗೆ ತಂಡ ಸ್ಪಂದಿಸಿದೆ.

ಹೊಡೆ ಹಾಗೂ ಇತರ ಪ್ರದೇಶಗಳಲ್ಲಿ ಚರಂಡಿ ಗಳಲ್ಲಿ ಕಸ ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳು ಜಮಾವಣೆಗೊಂಡು ಕೃತಕ ನೆರೆ ಸೃಷ್ಟಿಯಾಗುವ ಸಾಧ್ಯತೆ ಯಿತ್ತು. ಈ ಸಂದರ್ಭದಲ್ಲಿ ಕಸಕಡ್ಡಿಗಳನ್ನು ಅಲ್ಲಿಂದ ತೆರವುಗೊಳಿಸುವ ಕಾರ್ಯ ವನ್ನು ಕಾರ್ಯಕರ್ತರು ನಡೆಸಿದರು ಎಂದು ಪಿಎಫ್‌ಐ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News