ಜೂ. 2ರಂದು ಸಮಸ್ತ ಮದ್ರಸ ಶೈಕ್ಷಣಿಕ ವರ್ಷ ಪ್ರಾರಂಭ: ನಿರ್ವಾಹಕ ಸಮಿತಿ

Update: 2021-05-16 16:58 GMT

ಚೇಳಾರಿ, ಮೇ 16: ಪ್ರಸಕ್ತ ಸಾಲಿನ ಮದ್ರಸ ಶೈಕ್ಷಣಿಕ ವರ್ಷವು ಜೂ.2ಕ್ಕೆ (ಶವ್ವಾಲ್ 21) ಪ್ರಾರಂಭಿಸಲು ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಿರ್ವಾಹಕ ಸಮಿತಿಯು ಆನ್‌ಲೈನ್ ಸಭೆ ತೀರ್ಮಾನಿಸಿದೆ.

ಶವ್ವಾಲ್ 9ಕ್ಕೆ ಆರಂಭವಾಗಬೇಕಿದ್ದ ಮದ್ರಸ ಶೈಕ್ಷಣಿಕ ವರ್ಷ ಕೋವಿಡ್ -19 ವ್ಯಾಪಕವಾಗುತ್ತಿರುವ ಹಿನ್ನೆಲೆ ಲಾಕ್‌ಡೌನ್ ಕಾರಣವಾಗಿ ಈ ವರ್ಷ ಶವ್ವಾಲ್ 21ಕ್ಕೆ ಬದಲಾಯಿಸಲಾಗಿದೆ. ಮದ್ರಸಗಳು ಆಫ್‌ಲೈನ್ ಆಗಿ ಕಾರ್ಯಾಚರಿಸುವವರೆಗೆ ಆನ್‌ಲೈನ್ ತರಗತಿ ಮುಂದುವರಿಸಲು ಸಭೆ ತೀರ್ಮಾನಿಸಿದೆ. ಆನ್‌ಲೈನ್ ತರಗತಿಯಲ್ಲಿ ಮುಅಲ್ಲಿಮರ ಸಂಪೂರ್ಣ ಸಹಭಾಗಿತ್ವವನ್ನು ಖಚಿತಪಡಿಸಲಾಗುವುದು. ವಿದ್ಯಾಭ್ಯಾಸ ಬೋರ್ಡಿನ ಆನ್‌ಲೈನ್ ಚಾನೆಲ್ ಲಿಂಕ್ ಮುಫತ್ತಿಷರ ಮೂಲಕ ರೇಂಜ್ ಕಾರ್ಯದರ್ಶಿಗಳ ಮೂಲಕ ಮದ್ರಸ ಮುಅಲ್ಲಿಮರಿಗೆ ಹಸ್ತಾಂತರಿಸಲಾಗುವುದು. ತರಗತಿ ಅಧ್ಯಾಪಕರು ಪ್ರತ್ಯೇಕ ವಾಟ್ಸ್‌ಆ್ಯಪ್ ಗ್ರೂಪ್‌ಗಳು ರಚಿಸಿ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಿದ್ದಾರೆ.

ತರಗತಿಗಳು ಪ್ರಾರಂಭವಾಗುವ ಮುಂಚಿತವಾಗಿ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಸಿಗಲು ಕ್ರಮಕೈಗೊಳ್ಳಲಾಗುವುದು. ಬುಕ್‌ಡಿಪೋದಲ್ಲಿ ಇದಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗುತ್ತದೆ. ಖಾತೆ ಮೂಲಕ ಮುಂಗಡ ಪಾವತಿ ಮಾಡಿ ಬುಕಿಂಗ್ ಮಾಡಿದವರಿಗೆ ವಲಯ ಕೇಂದ್ರಗಳಿಗೆ ಪಠ್ಯಪುಸ್ತಕಗಳು ತಲುಪಿಸಲು ವ್ಯವಸ್ಥೆ ಮಾಡಲಾಗುವುದು.

ಮೇ 29,30ರಂದು ನಡೆಸಲು ತೀರ್ಮಾನಿಸಿದ ‘ಸೇ ಪರೀಕ್ಷೆ ಮತ್ತು ಸ್ಪೆಷಲ್ ಪರೀಕ್ಷೆಯನ್ನು ಕೋವಿಡ್-19 ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ನವೀಕರಣ ದಿನಾಂಕವನ್ನು ಮತ್ತೆ ಪ್ರಕಟಿಸಲಾಗುವುದು. ಮರು ಮೌಲ್ಯಮಾಪನ, ಸೇ ಪರೀಕ್ಷೆ, ಸ್ಪೆಷಲ್ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕವನ್ನು ಮೇ 30ರ ತನಕ ವಿಸ್ತರಿಸಲು ನಿರ್ಧರಿಸಲಾಯಿತು.

ನೂತನ ಅಧ್ಯಯನ ವರ್ಷಕ್ಕೆ ಅಗತ್ಯವಾದ ಪೂರ್ವಸಿದ್ಧತೆಗಳು ಮಾಡಿಕೊಳ್ಳಲು ಮದ್ರಸ ಸಮಿತಿ ಪದಾಧಿಕಾರಿಗಳಲ್ಲಿ ಮತ್ತು ಅಧ್ಯಾಪಕರಲ್ಲಿ ಸಭೆ ವಿನಂತಿಸಿದೆ. ವಿದ್ಯಾಭ್ಯಾಸ ಬೋರ್ಡ್ ಅಧ್ಯಕ್ಷ ಪಿ.ಕೆ.ಪಿ ಅಬ್ದುಸ್ಸಲಾಂ ಮುಸ್ಲಿಯಾರ್‌ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಿದರು.

 ಪ್ರಧಾನ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್ ಸ್ವಾಗತಿಸಿದರು. ಮ್ಯಾನೇಜರ್ ಮೋಯಿನ್ ಕುಟ್ಟಿ ಮಾಸ್ಟರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News