ಕೋವಿಡ್ ಸಲಹಾ ಸಮಿತಿಯಲ್ಲಿ ಎದುರಾಳಿ ಪಕ್ಷದ ಎಐಎಡಿಎಂಕೆ ನಾಯಕನಿಗೂ ಸ್ಥಾನ ನೀಡಿದ ತಮಿಳುನಾಡಿನ ನೂತನ ಸಿಎಂ ಸ್ಟಾಲಿನ್

Update: 2021-05-17 08:52 GMT

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ವಿಧಾನಸಭೆಯಲ್ಲಿ ಸದಸ್ಯರನ್ನು ಹೊಂದಿರುವ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನೊಳಗೊಂಡ  ಕೋವಿಡ್ ಸಲಹಾ ಸಮಿತಿಯಲ್ಲಿ ಬದ್ಧ ಎದುರಾಳಿ ಪಕ್ಷವಾಗಿರುವ ಎಐಎಡಿಎಂಕೆ  ಶಾಸಕರಿಗೂ ಅವಕಾಶವೊದಗಿಸಿ ತಾವು ದ್ವೇಷದ ರಾಜಕಾರಣದಿಂದ ದೂರ ಸರಿಯುತ್ತಿರುವ  ಸುಳಿವನ್ನು ನೀಡಿದ್ದಾರೆ.

ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ಮೇ 13ರಂದು ತಮಿಳುನಾಡು ಸೆಕ್ರಟೇರಿಯಟ್‍ನಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ 13 ಮಂದಿಯ ಸಮಿತಿ ರಚಿಸಲಾಗಿದ್ದು ಸಮಿತಿಯಲ್ಲಿ ಎಐಎಡಿಎಂಕೆ ನಾಯಕ ಹಾಗೂ ಮಾಜಿ ಆರೋಗ್ಯ ಸಚಿವ ಎಂ ಆರ್ ವಿಜಯಭಾಸ್ಕರ್ ಅವರನ್ನೂ ಸೇರಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಸ್ಟಾಲಿನ್ ಅವರಿದ್ದು ವಿಧಾನಸಭೆಯಲ್ಲಿ ಸದಸ್ಯರನ್ನು ಹೊಂದಿರುವ ಎಲ್ಲಾ ಪಕ್ಷಗಳ ತಲಾ ಒಬ್ಬರಿಗೆ ಈ ಸಮಿತಿಯಲ್ಲಿ ಅವಕಾಶ ಒದಗಿಸಲಾಗಿದೆ.

ಡಿಎಂಕೆಯ ಡಾ ಎನ್ ಎಝಿಲನ್,  ಪಿಎಂಕೆಯ ಜಿ ಕೆ ಮಣಿ, ಕಾಂಗ್ರೆಸ್ ಪಕ್ಷದ ಎ ಎಂ ಮಣಿರತ್ನಂ,  ಎಂಡಿಎಂಕೆಯ ಡಾ ಸದನ್ ತಿರುಮಲೈಕುಮಾರ್, ಬಿಜೆಪಿಯ ನೈನಾರ್ ನಾಗೇಂದ್ರನ್,  ವಿಸಿಕೆಯ  ಎಸ್ ಎಸ್ ಬಾಲಾಜಿ, ಸಿಪಿಐನ ಟಿ ರಾಮಚಂದ್ರನ್, ಮನತಿಯ ಮಕ್ಕಳ್ ಕಚ್ಚಿ ಪಕ್ಷದ ಡಾ ಎಂ ಎಚ್ ಜವಾಹರುಲ್ಲಾ, ಕೊಂಗುನಾಡು ಮಕ್ಕಳ್ ದೇಸೀಯ ಕಚ್ಚಿ ಪಕ್ಷದ ಆರ್ ಈಶ್ವರನ್, ತಮಿಝಗ ವಾಝ್ವುರಿಮೈ ಕಚ್ಚಿ ಪಕ್ಷದ ಟಿ ವೇಲ್ ಮುರುಗನ್,  ಪುರಚ್ಚಿ ಭರತಂ ಪಕ್ಷದ ಪೂವಲ್ ಜಗನ್ ಮೂರ್ತಿ ಹಾಗೂ ಸಿಪಿಎಂನ  ವಿ ಪಿ ನಗಲ್ ಮಲ್ಲಿ ಈ ಸಮಿತಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News