"ನಮ್ಮ ಸೈನ್ಯವು ಯುದ್ಧ ಕ್ರಿಮಿನಲ್‌ ಗಳಿಂದ ನಡೆಸಲ್ಪಡುವ ಭಯೋತ್ಪಾದಕ ಸಂಸ್ಥೆಯಾಗಿದೆ": ಇಸ್ರೇಲ್‌ ಸೇನೆಯ ಮಾಜಿ ಯೋಧ

Update: 2021-05-17 17:31 GMT
photo: youtube

ಟೆಲ್‌ ಅವೀವ್:‌ ಇಸ್ರೇಲ್‌ ಸೇನೆಯಲ್ಲಿ ಪೈಲಟ್‌ ಆಗಿ ಕಾರ್ಯನಿರ್ವಹಿಸಿ ಬಳಿಕ ಸೇನೆಯನ್ನು ತ್ಯಜಿಸಿರುವ ನಿವೃತ್ತ ಯೋಧ ಯೊನಾಥನ್‌ ಶಪೀರಾ ನೀಡಿರುವ ಹೇಳಿಕೆ ಸದ್ಯ ಸುದ್ದಿಯಲ್ಲಿದೆ. "ಇಸ್ರೇಲ್ ಸೈನ್ಯವು ಯುದ್ಧ ಕ್ರಿಮಿನಲ್‌ ಗಳಿಂದ ನಡೆಸಲ್ಪಡುವ ಭಯೋತ್ಪಾದಕ ಸಂಸ್ಥೆಯಾಗಿದೆ" ಎಂದು ಅವರು ಹೇಳಿಕೆ ನೀಡಿದ್ದಾಗಿ ವರದಿಯಾಗಿದೆ.

ಪ್ಯಾಲೆಸ್ತೀನಿಯನ್‌ ಎರಡನೇ ಇಂತಿಫಾದ ಸಮಯದಲ್ಲಿ 2003ರ ವೇಳೆಗೆ ಕ್ಯಾಪ್ಟನ್‌ ಶಪೀರಾ ರವರು ಇಸ್ರೇಳ್‌ ಸೇನೆಗೆ ರಾಜೀನಾಮೆ ನೀಡಿದ್ದರು. ಅನಾಡೋಲು ನ್ಯೂಸ್‌ ಏಜೆನ್ಸಿಗೆ ಅವರು ನೀಡಿದ ವಿಶೇಷ ಸಂದರ್ಶನದ ವೇಳೆ ಅವರು ಇಸ್ರೇಲ್‌ ಸೇನೆಯನ್ನು ಭಯೋತ್ಪಾದಕ ಸಂಘಟನೆಯ ಭಾಗ ಎಂದು ಹೇಳಿದ್ದಾರೆ.

ಎರಡನೇ ಇಂತಿಫಾದದ ಸಂದರ್ಭದಲ್ಲಿ ಇಸ್ರೇಲಿ ಏರ್‌ ಫೋರ್ಸ್‌ ಹಾಗೂ ಇಸ್ರೇಲಿ ಮಿಲಿಟರಿ ಮಾಡುತ್ತಿರುವುದು ಯುದ್ಧ ಕ್ರಿಮಿನಲ್‌ ಕೃತ್ಯ ಎನ್ನುವುದನ್ನು ನಾನು ಅರಿತೆ. ಮಿಲಿಯನ್‌ ಗಟ್ಟಲೆ ಇರುವ ಪ್ಯಾಲೆಸ್ತೀನಿ ನಾಗರಿಕರನ್ನು ಭಯಭೀತರನ್ನಾಗಿಸುತ್ತಿದೆ. ಇದೆಲ್ಲವೂ ನನಗೆ ಅರಿತಾದ ನಾನೊಬ್ಬ ಸೈನ್ಯ ಬಿಟ್ಟು ಬರುವುದೆಂದು ತೀರ್ಮಾನಿಸಿದ್ದಲ್ಲ, ಇತರ ಎಲ್ಲ ಪೈಲಟ್‌ ಗಳೂ ಸೇನೆಯನ್ನು ಮತ್ತು ಹಿಂಸಾತ್ಮಕ ಕೃತ್ಯಗಳನ್ನು ಬಿಟ್ಟು ಬರಬೇಕೆಂದು ಬಯಸಿದೆ" ಎಂದು ಅವರು ಹೇಳಿದ್ದಾರೆ.

ಇಸ್ರೇನಲ್ಲೇ ಬಾಲ್ಯವನ್ನು ಕಳೆದ ನಾನು ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಅರಿತಿದ್ದೇನೆ. ಸಣ್ಣ ಪ್ರಾಯದಲ್ಲೇ ಯಹೂದಿ ಉಗ್ರ ಸಿದ್ಧಾಂತಗಳನ್ನು ಬೋಧೀಸಲಾಗುತ್ತದೆ. ಪ್ಯಾಲೆಸ್ತೀನ್‌ ನ ಕುರಿತು ನಮಗೇನೂ ಅರಿವಿರುವುದಿಲ್ಲ. ನಮಗೆ 1948ರ ನಕ್ಬಾ ಬಗ್ಗೆಯೂ ಗೊತ್ತಿಲ್ಲ, ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆಯೂ ಅರಿವಿರುವುದಿಲ್ಲ ಎಂದು ಶಪೀರಾ ಹೇಳಿಕೆ ನೀಡಿದ್ದಾರೆ.

ಇಸ್ರೇಲಿ ಸೈನ್ಯವನ್ನು ತೊರೆದ ನಂತರ, ಶಪೀರಾ ಅಭಿಯಾನವನ್ನು ಪ್ರಾರಂಭಿಸಿದ್ದು, ಪ್ಯಾಲೆಸ್ತೀನ್‌ ನಾಗರಿಕರ ಮೇಲೆ ದಾಳಿ ಮಾಡುವ ಆದೇಶಗಳನ್ನು ಧಿಕ್ಕರಿಸುವಂತೆ ಇತರ ಮಿಲಿಟರಿ ಸದಸ್ಯರಿಗೆ ಪ್ರೋತ್ಸಾಹ ನೀಡಿದರು. ಈ ಅಭಿಯಾನದ ಕಾರಣದಿಂದ ಇತರ 27 ಸೇನಾ ಪೈಲಟ್‌ಗಳು 2003 ರಿಂದ ಇಸ್ರೇಲಿ ವಾಯುಸೇನೆಯ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News