×
Ad

ಕರಾಯ: ಮನೆಗೆ ನುಗ್ಗಿ ನಗ-ನಗದು ಕಳವು

Update: 2021-05-17 23:28 IST

ಉಪ್ಪಿನಂಗಡಿ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ- ನಗದನ್ನು ದೋಚಿದ ಘಟನೆ ಕರಾಯ ಗ್ರಾಮದ ಮುರಿಯಾಳ ಎಂಬಲ್ಲಿ ವರದಿಯಾಗಿದೆ.

ಶಾಹಿದಾ ಎಂಬವರ ಮನೆಯಲ್ಲಿ  ಮನೆ ಮಂದಿ ಕಲ್ಲಡ್ಕದ ತವರು ಮನೆಗೆ ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸೋಮವಾರದಂದು ತವರಿನಿಂದ ಅವರು ಹಿಂದುರುಗಿದ ವೇಳೆ ಮನೆಯ ಮುಂಭಾಗದ ಬೀಗ ಒಡೆಯಲ್ಪಟ್ಟದ್ದು ಕಂಡು ಬಂದಿತ್ತು. ಒಳಗೆ ಪ್ರವೇಶಿಸಿದಾಗ ಮನೆಯ ಕಪಾಟಿನಲ್ಲಿದ್ದ  ಐದು ಪವನಿನ ಚಿನ್ನದ ಸರ, ಅರ್ಧ ಪವನಿನ ಉಂಗುರ , ಹಾಗೂ 4000 ನಗದು ಹಣವನ್ನು ಕದ್ದೊಯ್ದಿರುವುದು ಕಂಡು ಬಂದಿದೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ. ಗಾನಾ ಕುಮಾರ್ , ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಎಎಸೈ ಜನಾರ್ದನ್  ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳವನ್ನು ಕರೆಯಿಸಿ ತನಿಖೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News