ಲಾಕ್ಡೌನ್, ಚಂಡಮಾರುತ: ಟೀಂ ವೆಲ್ಫೇರ್ ಬಳಗದಿಂದ ಮಾದರಿ ಪರಿಹಾರ ಕಾರ್ಯ
ಮಂಗಳೂರು, ಮೇ. 17: ಪ್ರಸಕ್ತ ದಿನಗಳಲ್ಲಿ ಕೊರೊನಾ ಪಿಡುಗಿನಿಂದಾಗಿರುವ ಲಾಕ್ಡೌನ್ ಕಾರಣದಿಂದ ಉಂಟಾಗಿರುವ ಅರ್ಥಿಕ ಬಿಕ್ಕಟ್ಟು ಹಾಗೂ ಪ್ರಕೃತಿ ವಿಕೋಪ "ತೌಕ್ತೆ" ಚಂಡಮಾರುತ ಸೇರಿದಂತೆ ವಿವಿಧ ವಿಷಮ ಪರಿಸ್ಥಿತಿಯಲ್ಲಿನ ಜನಸಾಮಾನ್ಯರ ಬವಣೆಗಳಿಗೆ ಬಹಳ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರುವ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಜನಸೇವಾ ಘಟಕವಾಗಿರುವ ಟೀಂ ವೆಲ್ಫೇರ್ ಬಳಗದವರ ನಿಸ್ವಾರ್ಥ ಸೇವೆಯು ಸಾರ್ವಜನಿಕರೆಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಟೀಂ ವೆಲ್ಪೇರ್ ಮೆಡಿಕಲ್ ವಿಭಾಗದ ಉಸ್ತುವಾರಿ ಅಬ್ದುಲ್ ಸಲಾಮ್ ಸಿ.ಎಚ್. ತಿಳಿಸಿದ್ದಾರೆ.
ಟೀಂ ವೆಲ್ಪೇರ್ ಕಾರ್ಯಕರ್ತರು ಕೂಲಿ ಕಾರ್ವಿುಕರು, ವಲಸಿಗರು, ನಿರ್ಗತಿಕರು ಅನ್ನವಿಲ್ಲದೆ ಕಂಗೆಡುತ್ತಿರುವ ಬಡಪಾಯಿಗಳನ್ನು ಸಂಪರ್ಕಿಸಿದ್ದು ಅವರಿಗೆ ಬೇಕಾದ ಆಹಾರ ಮತ್ತು ವಸತಿಗಳ ಪರ್ಯಾಯ ಯೋಜನೆಯನ್ನು ಕಲ್ಪಿಸಿಕೊಟ್ಟಿರುವರು. ಅದರಲ್ಲೂ, ಉಳ್ಳಾಲದ ಟೀಂ ವೆಲ್ಫೇರ್ ಸದಸ್ಯರು ದಾಸೋಹದಂತಹ ಕೈಂಕರ್ಯದಲ್ಲಿ ತನ್ನ ಶಕ್ತಿ ಮೀರಿ ಸಹಕರಿಸುತ್ತಿದೆಯೆಂದವರು ತಿಳಿಸಿದರು.
ಕೊರೋನ ಇದರ ದ್ವೀತಿಯ ಅಲೆ ಪ್ರಾರಂಭವಾದ ದಿನದಿಂದಲೇ ಈ ತಂಡ ಆಸ್ಪತ್ರೆಯಲ್ಲಿರುವ ರೋಗಿಗಳ ಬಂಧುಗಳಿಗೆ ಪ್ರತಿದಿನ ಮಧ್ಯಾಹ್ನದ ಊಟದ ವ್ಯವಸ್ಥೆ, ರಮಝಾನ್ ದಿನಗಳಲ್ಲಿ ಇಫ್ತಾರ್ ಕಿಟ್ ಹೀಗೆ ಅರ್ಥಿಕ ಮುಗ್ಗಟ್ಟಿನಲ್ಲಿದ್ದ ಜನರ ಹಸಿವನ್ನು ನೀಗಿಸಲು ವಿವಿಧ ರೀತಿಯಲ್ಲಿ ತಮ್ಮ ಧನ ಮತ್ತು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಸುಮಾರು 1750 ಮಂದಿಗೆ ಮಧ್ಯಾಹ್ನದ ಊಟ, 110 ಮನೆಗಳಿಗೆ ರೇಷನ್ ಸಾಮಗ್ರಿ ಮತ್ತು ರಮಝಾನ್ ಸಂದರ್ಭದಲ್ಲಿ ಸುಮಾರು 500 ಇಫ್ತಾರ್ ಕಿಟ್ ಹಾಗೂ ಇತ್ತೀಚೆಗೆ ಸಂಭವಿಸಿದ ತೌಕ್ತೆ" ಚಂಡಮಾರುತದಿಂದ ತಲಪಾಡಿ ಗ್ರಾಮದಲ್ಲಿ ನೆರೆ ಹಾವಳಿ ಪರಿಣಾಮ ನಿರಾಶ್ರಿತರಿಗೆ ಊಟದ ವ್ಯವಸ್ಥೆಯನ್ನು ಸಹ "ಟೀಮ್ ವೆಲ್ಪೇರ್" ನಿಂದ ಮಾಡಿಕೊಡಲಾದೆಯೆಂಬ ವಿವರಣೆಗಳನ್ನು ಅಬ್ದುಲ್ ಸಲಾಮ್ ಸಿ.ಎಚ್.ರವರು ನೀಡಿದರು.
ಅದಲ್ಲದೆ, ವೆಲ್ಪೇರ್ ಪಕ್ಷದ ಟೀಂ ವೆಲ್ಪೇರ್ ತಂಡ ವಿವಿಧ ವಿಭಾಗಗಳನ್ನು ರಚನೆ ಮಾಡಿ ಕಾರ್ಯ ನಿರ್ವಹಿಸುತ್ತದೆ. ಅದರ ಮೆಡಿಕಲ್ ವಿಭಾಗವು ಕೊರೋನ ಪೀಡಿತರಿಗೆ ಬೆಡ್ ವ್ಯವಸ್ಥೆ, ಅಗತ್ಯವಿರುವ ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆ ಮತ್ತು ಮೆಡಿಕಲ್ ಕಿಟ್ ಗಳನ್ನು ಪೊರೈಸುತ್ತಿದೆ. ದಾನಿಗಳ ನೆರವಿನಿಂದ ಅನೇಕ ಬಡ ರೋಗಿಗಳ ಡಿಸ್ಚಾರ್ಚ್ ಮಾಡಿದೆ ಮಾತ್ರವಲ್ಲದೆ ಯಾವುದೇ ಜಾತಿಮತ ಭೇಧಭಾವವಿಲ್ಲದೆ ಕೋವಿಡ್ ಪೀಡಿತರಾಗಿ ಮರಣಹೊಂದಿದ ಎಲ್ಲಾ ಮೃತದೇಹಗಳ ಸಂಸ್ಕಾರದ ಕುರಿತು ತನ್ನ ಕಾರ್ಯಕರ್ತರಿಗೆ ತರಬೇತಿಯನ್ನು ನೀಡಿದೆ. ಈವರೆಗೆ ಒಟ್ಟು 6 ಮೃತದೇಹಗಳ ಅಂತಿಮ ಪರಿಪಾಲನೆ ಮಾಡಲಾಗಿದೆ ಎಂದು ಟೀಮ್ ವೆಲ್ಫೇರ್ "ಅಂತಿಮ ಸಂಸ್ಕಾರದ" ಹೊಣೆಗಾರರಾಗಿರುವ ಹುಸೇನ್ ತೊಕ್ಕೊಟು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ನಮ್ಮ ತಂಡದಲ್ಲಿ ಒಟ್ಟು ಸುಮಾರು 90 ಮಂದಿ ಸ್ವಯಂಸೇವಕರಿದ್ದು, ಹಗುಲಿರುಳೆನ್ನದೆ ಅವರು ತಮಗೆ ಬರುವ ಸಾರ್ವಜನಿಕರೆಲ್ಲರ ಕರೆಗೆ ಓಗೊಟ್ಟು ದುಡಿಯುತ್ತಿದ್ದಾರೆ ಎಂದವರು ತಿಳಿಸಿದರು.