'ನಾಥುರಾಮ್ ಗೋಡ್ಸೆ ಅಮರ್ ರಹೇ' ಹ್ಯಾಶ್‌ಟ್ಯಾಗ್‌ನೊಂದಿಗೆ ಗಾಂಧಿ ಹಂತಕನ ಶ್ಲಾಘಿಸಿ ಟ್ವೀಟ್

Update: 2021-05-19 16:50 GMT

ಹೊಸದಿಲ್ಲಿ: ಬಲಪಂಥೀಯ ಟ್ವಿಟರ್ ಬಳಕೆದಾರರು ಬುಧವಾರ ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯ ಜನ್ಮದಿನದ ಹಿನ್ನೆಲೆಯಲ್ಲಿ ಆತನನ್ನು  ಶ್ಲಾಘಿಸಿ ಟ್ವೀಟ್ ಗಳನ್ನು ಪೋಸ್ಟ್ ಮಾಡಿದ್ದಾರೆ.  ಗೋಡ್ಸೆ ಮೇ 19, 1910 ರಂದು ಬಾರಾಮತಿಯಲ್ಲಿ ಜನಿಸಿದ್ದ.

ಬಲಪಂಥೀಯ ನೆಟ್ಟಿಗರು # 'ನಾಥುರಾಮ್ ಗೋಡ್ಸೆ ಅಮರ್ ರಹೇ'  ಹ್ಯಾಶ್‌ಟ್ಯಾಗ್‌ ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ಅಭಿಯಾನದಲ್ಲಿ ಕೆಲವು ಬಳಕೆದಾರರು ಗೋಡ್ಸೆಯನ್ನು  ಹೀರೊ ಎಂದು ಶ್ಲಾಘಿಸಿದರೆ, ಇತರರು ಆತನನ್ನು ದಂತಕಥೆ ಎಂದು ಕರೆದಿದ್ದಾರೆ.

ಗೋಡ್ಸೆಯ ಅಪರಾಧವನ್ನು ಸಮರ್ಥಿಸಲು ಮಹಾತ್ಮ ಗಾಂಧಿ ಹಾಗೂ  ಅವರ ನೀತಿಗಳನ್ನು ಹಲವರು ಬಳಕೆದಾರರು ಟೀಕಿಸಿದರು.

ಭಾರತದ ವಿಭಜನೆಯ ಸಮಯದಲ್ಲಿ ಭಾರತದ ಮುಸ್ಲಿಮರ ರಾಜಕೀಯ ಬೇಡಿಕೆಗಳಿಗೆ ಗಾಂಧಿ ಒಲವು ತೋರಿದ್ದಾರೆ ಎಂದು ನಂಬಿದ್ದ ಪುಣೆಯ ಗೋಡ್ಸೆ, ನಾರಾಯಣ್ ಆಪ್ಟೆ ಹಾಗೂ  ಇತರ ಆರು ಜನರೊಂದಿಗೆ ಹತ್ಯೆಗೆ ಸಂಚು ರೂಪಿಸಿದ್ದ.

ಒಂದು ವರ್ಷದವರೆಗೆ ನಡೆದ ವಿಚಾರಣೆಯ ನಂತರ, 1949 ರ ನವೆಂಬರ್ 8 ರಂದು ಗೋಡ್ಸೆಗೆ ಮರಣದಂಡನೆ ವಿಧಿಸಲಾಯಿತು. ಗೋಡ್ಸೆಯನ್ನು 1949 ರ ನವೆಂಬರ್ 15 ರಂದು ಅಂಬಾಲಾ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News