×
Ad

ಕರ್ನಾಟಕ ಮುಸ್ಲಿಂ ಜಮಾ‌ಅತ್ "ಸಹಾಯ್ ಬೆಳ್ತಂಗಡಿ ಸರ್ಕಲ್" ನಿಂದ 2 ತುರ್ತು ವಾಹನ ಅನಾವರಣ

Update: 2021-05-19 23:09 IST

ಬೆಳ್ತಂಗಡಿ; ಕರ್ನಾಟಕ ಮುಸ್ಲಿಂ ಜಮಾ‌ಅತ್ "ಸಹಾಯ್ ಬೆಳ್ತಂಗಡಿ ಸರ್ಕಲ್" ನಿಂದ ಕೋವಿಡ್ ಕಾಲಘಟ್ಟದಲ್ಲಿ ತುರ್ತು ಅಗತ್ಯ ಇರುವವರಿಗಾಗಿ ಸೇವೆ ನೀಡಲು 2 ತುರ್ತು ವಾಹನ ಅನಾವರಣವನ್ನು ಬುಧವಾರ ಸುನ್ನೀ ಸಂಯುಕ್ತ ಜಮಾ‌ಅತ್ ಉಪ ಖಾಝಿ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್  ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಸುನ್ನೀ ಸಂಯುಕ್ತ ಜಮಾ‌ಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಅಸ್ಸಯ್ಯಿದ್ ಇಸ್ಮಾಈಲ್ ತಂಙಳ್, ಕಾರ್ಯದರ್ಶಿ ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಕರ್ನಾಟಕ ಮುಸ್ಲಿಂ ಜಮಾ‌ಅತ್ ಅಧ್ಯಕ್ಷ ಎಸ್.ಎಂ ಕೋಯ ತಂಙಳ್, ಕಾರ್ಯದರ್ಶಿ ಮಾಜಿ ಸೈನಿಕ ಮುಹಮ್ಮದ್ ರಫಿ, ಉಪಾಧ್ಯಕ್ಷ ಅಬ್ಬೋನು ಮದ್ದಡ್ಕ, ಸಂಘಟನಾ ಕಾರ್ಯದರ್ಶಿ ಎಂ‌.ಬಿ.ಎಂ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಬೆಳ್ತಂಗಡಿ ಸರ್ಕಲ್ ಡೈರೆಕ್ಟರ್‌ಗಳಾದ  ಅಬ್ದುರ್ರಶೀದ್ ಬಲಿಪಾಯ, ಕೆ.ವೈ ಹಂಝ ಮದನಿ ಗುರುವಾಯನಕೆರೆ, ಸಹಾಯ್ ಉಜಿರೆ ಟೀಂ ಅಮೀರ್ ಎಮ್.ಎ ಕಾಸಿಂ ಮುಸ್ಲಿಯಾರ್ ಮಾಚಾರು,‌ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಹಾರಿಸ್ ಕುಕ್ಕುಡಿ, ಕಾರ್ಯದರ್ಶಿ ತೌಫೀಕ್ ವೇಣೂರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News