ಭಾರತದ ವೇಗದ ಬೌಲರ್ ಭುವನೇಶ್ವರ ಕುಮಾರ್ ಅವರ ತಂದೆ ನಿಧನ

Update: 2021-05-20 15:27 GMT

ಹೊಸದಿಲ್ಲಿ: ಕಳೆದ ಎಂಟು ತಿಂಗಳಿನಿಂದ ಪಿತ್ತಜನಕಾಂಗದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ  ಭಾರತದ ವೇಗಿ ಭುವನೇಶ್ವರ  ಕುಮಾರ್ ಅವರ ತಂದೆ ಕಿರಣ್ ಪಾಲ್ ಸಿಂಗ್ ಗುರುವಾರ ಮೀರತ್ ನ  ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಇಂದ್ರೇಶ್ ದೇವಿ, ಮಗ  ಭುವನೇಶ್ವರ ಹಾಗೂ ಮಗಳು ರೇಖಾ  ಅವರನ್ನು ಅಗಲಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭುವನೇಶ್ವರ್ ಅವರು  ಯುಎಇಯಲ್ಲಿ  ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಿದ್ದಾಗ ಅವರ ತಂದೆಗೆ ಮೊದಲ ಬಾರಿ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು.  ತಂದೆಯ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣಕ್ಕೆ ಅವರು ಯುಎಇಯಿಂದ ಭಾರತಕ್ಕೆ ವಾಪಸಾಗಿದ್ದರು ಎಂದು ESPN Cricinfo ವರದಿ ಮಾಡಿದೆ.

ಬ್ರಿಟನ್ ನಲ್ಲಿ  ವೈದ್ಯರನ್ನು ಸಂಪರ್ಕಿಸಿದ ನಂತರ ಸಿಂಗ್ ಹೊಸದಿಲ್ಲಿಯ  ಏಮ್ಸ್  ನಲ್ಲಿ ಕೀಮೋಥೆರಪಿ ಸೇರಿದಂತೆ ಹಲವು  ಚಿಕಿತ್ಸೆಗೆ ಒಳಗಾಗಿದ್ದರು.

ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಎರಡು ವಾರಗಳ ಹಿಂದೆ ಮೀರತ್‌ನ ಖಾಸಗಿ  ಆಸ್ಪತ್ರೆಗೆ ದಾಖಲಾಗಿದ್ದರು.

ಕಿರಣ್ ಪಾಲ್ ಸಿಂಗ್ ಅವರು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News